ಬೆಂಗಳೂರು, ಡಿ.05 (DaijiworldNews/PY): "ಸಿಎಂ ಬಿ.ಎಸ್.ಯಡಿಯೂರಪ್ಪ ಓರ್ವ ಹಿಟ್ಲರ್. ಮರಾಠರ ಏಜೆಂಟರಂತೆ ಅವರು ವರ್ತಿಸುತ್ತಿದ್ದಾರೆ" ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
"ಪೊಲೀಸ್ ಬಲ ಬಳಸಿ ಸುಮಾರು 30 ಸಾವಿರ ಕನ್ನಡಪರ ಹೋರಾಟಗಾರರನ್ನು ವಶಪಡಿಸಿಕೊಂಡಿದ್ದಾರೆ. ಹೋರಾಟಗಾರರನ್ನು ಬಂಧಿಸುವ ಮುಖೇನ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡುತ್ತಿದ್ದಾರೆ. ಮರಾಠ ಪ್ರಾಧಿಕಾರ ರದ್ದು ಆಗುವ ತನಕ ಹೋರಾಟ ಮುಂದುವರೆಯಲಿ" ಎಂದಿದ್ದಾರೆ.
"ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಆದರೆ, ಇಂತಹ ಕರೆಗಳಿಗೆ ನಾನು ಹೆದರುವುದಿಲ್ಲ. ಪರಭಾಷಿಕ ಐಜಿ. ಡಿಜಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು. ಸಿದ್ದರಾಮಯ್ಯ, ದೇವೇಗೌಡ. ಡಿ.ಕೆ.ಶಿವಕುಮಾರ್ ಅವರ ಮೌನ ಮುರಿಯಬೇಕು" ಎಂದು ಹೇಳಿದ್ದಾರೆ.
"ಈ ರೀತಿಯಾಗಿ ಯಾವ ಸರ್ಕಾರವು ನಡೆದುಕೊಂಡಿಲ್ಲ. ನನ್ನ ಮೂವತ್ತು ವರ್ಷಗಳ ಹೋರಾಟ ಜೀವನದಲ್ಲಿ ಈ ರೀತಿಯಾಗಿ ಪ್ರತಿಭಟನೆಯನ್ನು ಹತ್ತಿಕ್ಕುವುದನ್ನು ಕಂಡಿಲ್ಲ" ಎಂದು ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದ ಹೇಳಿದ್ದಾರೆ.