ತಿರುವನಂತಪುರ, ಡಿ.05 (DaijiworldNews/PY): ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸಿ.ಎಂ. ರವೀಂದ್ರನ್ ಅವರಿಗೆ ಜಾರಿ ನಿದೇಶನಾಲಯವು ಮೂರನೇ ಬಾರಿ ಸಮನ್ಸ್ ನೀಡಿದೆ.
ಕಳೆದ ತಿಂಗಳು ಅವರಿಗೆ ಎರೆಡು ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ, ಕೊರೊನಾ ಸೋಂಕು ತಗುಲಿದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಕಾರಣ ರವೀಂದ್ರ ಅವರು ವಿಚಾರಣೆಗೆ ಗೈರಾಗಿದ್ದರು.
ರವೀಂದ್ರನ್ ಅವರಿ ಸಿಎಂ ಹಾಗೂ ಗಲವು ಸಿಪಿಎಂ ಮುಖಂಡರಿಗೆ ಆಪ್ತರಾಗಿದ್ದಾರೆ. ರವೀಂದ್ರನ್ ಹಾಗೂ ಅವರ ಕುಟುಂಬದವರ ಆದಾಯ ಹಾಗೂ ಹೂಡಿಕೆಗಳ ಬಗ್ಗೆ ಈಗಾಲೇ ಇಡಿ ವಿವರಗಳನ್ನು ಸಂಗ್ರಹಿಸಿದೆ.
ಡಿ.10ರಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದು, ವಿಚಾರಣೆಯ ಸಂದರ್ಭ ಮತ್ತಷ್ಟು ಮಹತ್ವದ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜತಾಂತ್ರಿಕ ಮಾರ್ಗವನ್ನು ದುರುಪಯೋಗಪಡಿಸಿಕೊಂಡು ಚಿನ್ನ ಕಳ್ಳ ಸಾಗಣೆ ಮಾಡಿದವರೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆ ಹಿರಿಯ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಅವರು ಸಿಎಂ ಅವರ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅಮಾನತಾಗಿದ್ದರು.