ನವದೆಹಲಿ, ಡಿ.05 (DaijiworldNews/PY): ಭಾರತ ಇಡೀ ಜಗತ್ತಿನಲ್ಲೇ ಅತೀ ಹೆಚ್ಚು ಕೊರೊನಾ ಲಸಿಕೆ ಖರೀದಿ ಮಾಡಿದ ರಾಷ್ಟ್ರವಾಗಿದೆ.
ಸಾಂದರ್ಭಿಕ ಚಿತ್ರ
ಭಾರತವು ಒಟ್ಟು ಸುಮಾರು 160 ಕೋಟಿ ಡೋಸ್ಗಳನ್ನು ಖರೀದಿ ಮಾಡಿದ್ದು, ಶೇ.60ರಷ್ಟು ಜನರಿಗೆ ಲಸಿಕೆ ಕೊಡಬಹುದು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಮೇರಿಕಾದ ಡ್ಯೂಕ್ ಯೂನಿವರ್ಸಿಟಿ ಗ್ಲೋಬಲ್ ಹೆಲ್ತ್ ಇನ್ನೋವೇಷನ್ ಸೆಂಟರ್, ಅಮೆರಿಕದ ನೊವಾವ್ಯಾಕ್ಸ್ ಕಂಪನಿಯಿಂದ 100 ಕೋಟಿ, ಆಸ್ಟ್ರಾಜೆನೆಕಾ ಕಂಪನಿಯಿಂದ 50 ಕೋಟಿ ಹಾಗೂ ರಷ್ಯಾದ ಗಮಲೆಯಾ ರೀಸರ್ಚ್ ಇನ್ಸ್ಟಿಟ್ಯೂಟ್ನಿಂದ 10 ಕೋಟಿ ಡೋಸ್ಗಳನ್ನು ಭಾರತ ಖರೀದಿ ಮಾಡಿದೆ ಎಂದು ಹೇಳಿದೆ.
ಸೂಕ್ಷ್ಮ ರೋಗಾಣು ಶಾಸ್ತ್ರಜ್ಞ ಶಾಹೀದ್ ಜಮೀಲ್ ಮಾತನಾಡಿದ್ದು, ಈ ಅಂಕಿ ಅಂಶಗಳನ್ನು ಸರ್ಕಾರಿ ಅಧಿಕಾರಿಗಳ ಹಾಗೂ ಇತರೆ ಮೂಲಗಳಿಂದ ಕಲೆಹಾಕಿದ ಮಾಹಿತಿಯ ಆಧಾರದ ಸಿದ್ದ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಕೊರೊನಾ ಲಸಿಕೆ ಖರೀದಿ ಮಾಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಉಳಿದಂತೆ ಅಮೇರಿಕಾ ಹಾಗೂ ಐರೋಪ್ಯ ಒಕ್ಕೂಟ ನಂತರದ ಸ್ಥಾನಗಳಲ್ಲಿವೆ ಎಂದು ತಿಳಿಸಿದೆ.