ಕೋಲಾರ, ಡಿ.05 (DaijiworldNews/HR): "ಕೈ ಮುಗಿದು ಕೇಳಿಕೊಳ್ಳುತ್ತೇನೆ ನನ್ನ ಭವಿಷ್ಯ ಹಾಳು ಮಾಡಬೇಡಿ, ನಾನು ಮತ್ತೊಮ್ಮೆ ಚುನಾವಣೆಗೆ ನಿಂತು ಶಾಸಕನಾಗಬೇಕೆಂದುಕೊಂಡಿದ್ದೇನೆ ಹಾಗಾಗಿ ಮಾಧ್ಯಮದಲ್ಲಿ ಏನೇನೋ ಸುಳ್ಳು ಸುದ್ದಿ ಹಾಕಿ ನನ್ನ ತೇಜೋವಧೆ ಮಾಡಬೇಡಿ" ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ವರ್ತೂರು ಪ್ರಕಾಶ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ ಅವರನ್ನು ಭೇಟಿಯಾಗಿ ತಮ್ಮ ಅಪಹರಣ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಿದ್ದು, ಸುಮಾರು 45 ನಿಮಿಷ ಮಾತುಕತೆ ನಡೆಸಿ ತಮ್ಮ ಹಣಕಾಸು ವ್ಯವಹಾರ, ಡೇರಿ ಉದ್ಯಮ, ಕೃಷಿಗೆ ಸಂಬಂಧಿಸಿದಂತೆ ವಿವರ ನೀಡಿ, ಅಪಹರಣ ಘಟನೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳ ಬಗ್ಗೆ ಸುಳಿವು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಮಕ್ಕಳಾಣೆಗೂ ನಾನು ಅಪಹರಣಕ್ಕೆ ಸಂಬಂಧಪಟ್ಟಂತೆ ಈವರೆಗೆ ಹೇಳಿರುವುದೆಲ್ಲಾ ಸತ್ಯ. ಕೈ ಮುಗಿದು ಕೇಳಿಕೊಳ್ಳುತ್ತೇನೆ, ನನ್ನ ಭವಿಷ್ಯ ಹಾಳು ಮಾಡಬೇಡಿ, ನಾನು ಮತ್ತೊಮ್ಮೆ ಚುನಾವಣೆಗೆ ನಿಂತು ಶಾಸಕನಾಗಬೇಕೆಂದುಕೊಂಡಿದ್ದೇನೆ ಹಾಗಾಗಿ ಮಾಧ್ಯಮದಲ್ಲಿ ಏನೇನೋ ಸುಳ್ಳು ಸುದ್ದಿ ಹಾಕಿ ನನ್ನ ತೇಜೋವಧೆ ಮಾಡಬೇಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನುಕಾರು ಚಾಲಕ ಸುನಿಲ್ ಅಪಹರಣಕಾರರಿಂದ ತಪ್ಪಿಸಿಕೊಳ್ಳದಿದ್ದರೆ ಅಲ್ಲಿ ನನ್ನ ಕೊಲೆಯಾಗುತ್ತಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ತನಿಖೆ ಚುರುಕುಗೊಳಿಸುವಂತೆ ಕೇಳಿದ್ದೇನೆ ಎಂದು ಹೇಳಿದ್ದಾರೆ.