ಪಣಜಿ,ಡಿ. 04 (DaijiworldNews/HR): ಆಮ್ ಆದ್ಮಿ ಪಕ್ಷದ ಮಾಜಿ ಗೋವಾ ಸಂಚಾಲಕ ಎಲ್ವಿಸ್ ಗೋಮ್ಸ್ ಅವರು ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ವ್ಯವಹಾರಗಳನ್ನು ದೆಹಲಿ ಘಟಕ ನಿಯಂತ್ರಿಸಲು ಪ್ರಾರಂಭಿಸಿದ ಬಳಿಕ ನಾನು ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ" ಎಂದರು.
ಇನ್ನು "ಇತ್ತೀಚಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷ ತನ್ನ ಸಿದ್ಧಾಂತದಿಂದ ದೂರವಾಗಿದೆ" ಎಂದು ಆರೋಪಿಸಿದ್ದಾರೆ.
ಮಾಜಿ ಅಧಿಕಾರಿ ಗೋಮ್ಸ್ ಅವರು 2017ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು.