ಬೆಳಗಾವಿ, ಡಿ. 04 (DaijiworldNews/HR): ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದು ಅತ್ಯಂತ ಮುಖ್ಯವಾಗಿದ್ದು, ಗೋಕಾಕ ಅಥವಾ ಚಿಕ್ಕೋಡಿ ತಾಲೂಕಿನವರಲ್ಲಿ ಯಾರಾದರೂ ಒಬ್ಬರು ಹಿಂದೆ ಸರಿದು ಹೋದರೆ ಗೋಕಾಕ ಅಥವಾ ಚಿಕ್ಕೋಡಿ ಜಿಲ್ಲೆಯನ್ನು ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯ ಮನವಿ ಸ್ವೀಕರಿಸಿ ಮಾತನಾಡಿದ ಅವರು ,"ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಯನ್ನಾಗಿ ಮಾಡಲು ನಿರ್ಧರಿಸಿದ್ದರು. ಆದರೆ ತಾಂತ್ರಿಕ ಕಾರಣದಿಂದ ಕೈಬಿಡಲಾಗಿದೆ" ಎಂದರು.
ಇನ್ನು "ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಲಾಗುವದು. ಚಿಕ್ಕೋಡಿ ಮತ್ತು ಗೋಕಾಕ ತಾಲೂಕಿನಲ್ಲಿ ಯಾರಾದರೂ ಒಬ್ಬರು ಹಿಂದೆ ಸರಿದರೆ ಚಿಕ್ಕೋಡಿ ಅಥವಾ ಗೋಕಾಕನ್ನು ಜಿಲ್ಲೆ ಮಾಡಬಹುದು" ಎಂದು ಹೇಳಿದ್ದಾರೆ.