ನವದೆಹಲಿ, ಡಿ.04 (DaijiworldNews/PY): "ಇಂದು ನಡೆಯುವ ಸರ್ವಪಕ್ಷ ಸಭೆಯಲ್ಲಿ, ಭಾರತದ ಪ್ರತಿಯೋರ್ವ ನಾಗರಿಕನಿಗೂ ಉಚಿತವಾಗಿ ಕೊರೊನಾ ಲಸಿಕೆ ಯಾವಾಗ ದೊರೆಯಲಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸುತ್ತಾರೆ ಎಂದು ಭಾವಿಸುತ್ತೇವೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಂದು ನಡೆಯುವ ಸರ್ವಪಕ್ಷ ಸಭೆಯಲ್ಲಿ, ಭಾರತದ ಪ್ರತಿಯೋರ್ವ ನಾಗರಿಕನಿಗೂ ಉಚಿತವಾಗಿ ಕೊರೊನಾ ಲಸಿಕೆ ಯಾವಾಗ ದೊರೆಯಲಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸುತ್ತಾರೆ ಎಂದು ಭಾವಿಸುತ್ತೇವೆ" ಎಂದಿದ್ದಾರೆ.
ದೇಶದಲ್ಲಿನ ಕೊರೊನಾದ ಸ್ಥಿತಿಗತಿ ಸೇರಿದಂತೆ ಲಸಿಕೆ ಪೂರೈಕೆಗೆ ಎದುರಾಗುವಂತ ಸವಾಲುಗಳ ವಿಚಾರವಾಗಿ ಚರ್ಚೆ ನಡೆಸುವ ಸಲುವಾಗಿ ಪ್ರಧಾನ ಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎನ್ನುವ ವಿಚಾರದ ಹಿನ್ನೆಲೆ ರಾಹುಲ್ ಈ ಹೇಳಿಕೆ ನೀಡಿದ್ದಾರೆ.