ಭೋಪಾಲ್ , ಡಿ.04 (DaijiworldNews/HR): ಮಧ್ಯಪ್ರದೇಶದ ರತ್ಲಾಮ್ನಲ್ಲಿ ಸೈಕೋಪಾತ್ ಕಿಲ್ಲರ್ ಎನ್ಕೌಂಟರ್ಗೆ ಬಲಿಯಾಗಿದದು, ಈ ಕಾರ್ಯಾಚರಣೆ ವೇಳೆ ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್ 25ರಂದು ರತ್ಲಾಮ್ನಲ್ಲಿ ಚೋಟಿ ದೀಪಾವಳಿ ಆಚರಣೆಯ ಸಂಭ್ರಮಾಚರಣೆಯಲ್ಲಿ ಜನರು ಪಾಲ್ಗೊಂಡಿದ್ದ ವೇಳೆ ನಟೋರಿಯಸ್ ಕಿಲ್ಲರ್ ದೇವಾಲ್, ಮನೆಯೊಂದಕ್ಕೆ ನುಗ್ಗಿ ಪತಿ, ಪತ್ನಿ ಮತ್ತು ಮಗಳು ಸೇರಿದಂತೆ ಮೂವರನ್ನು ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರತ್ಲಾಮ್ ನಲ್ಲಿ ಸಲೂನ್ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ತನಗೆ ಸೇರಿದ್ದ ಜಾಗವನ್ನು ಮಾರಾಟ ಮಾಡಿ ಆ ಹಣವನ್ನು ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ತಿಳಿದಿದ್ದ ಕಿಲ್ಲರ್ ದೇವಾಲ್ ಕುಟುಂಬದ ಮೂವರನ್ನು ಗುಂಡಿಕ್ಕಿ ಹತ್ಯೆಗೈದು ಹಣ ದೋಚಿ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.
ಇನ್ನು ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳಾದ ಅನುರಾಗ್ ಮೇಹಾರ್ (25ವರ್ಷ), ಗೌರವ್ ಬಿಲ್ವಾಲ್ (22ವರ್ಷ) ಮತ್ತು ಲಾಲಾ ಭಾಬೋರ್ (20ವರ್ಷ) ನನ್ನು ಪೊಲೀಸರು ಬಂಧಿಸಿದ್ದಾರೆ.