ನವದೆಹಲಿ, ಡಿ.04 (DaijiworldNews/PY): ಭಾರತೀಯ ನೌಕಾಪಡೆ ದಿನದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಪ್ರಧಾನಿ ನರೇಂದರರ ಮೋದಿ, ರಕ್ಷಣ ಸಚಿವ ರಾಜನಾಥ್ ಸಿಂಗ್ ಹಾಗೂ ಹಲವು ಮಂದಿ ಶುಭ ಕೋರಿದ್ದಾರೆ.
ಟ್ವೀಟ್ ಮೂಲಕ ಶುಭ ಕೋರಿದ ರಾಷ್ಟ್ರಪತಿ, "ನೌಕಾಪಡೆಯ ದಿನದಂದು ನಮ್ಮ ನೌಕಾಪಡೆಯ ಸಿಬ್ಬಂದಿಗೆ, ನಿವೃತ್ತ ಹಿರಿಯ ಸಿಬ್ಬಂದಿಗಳು ಸೇರಿದಂತೆ ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳು. ನಮ್ಮ ಕಡಲ ಗಡಿನಾಡುಗಳನ್ನು ರಕ್ಷಿಸುವಲ್ಲಿ, ನಮ್ಮ ವ್ಯಾಪಾರ ಮಾರ್ಗಗಳನ್ನು ಭದ್ರಪಡಿಸುವಲ್ಲಿ ಹಾಗೂ ನಾಗರಿಕ ತುರ್ತು ಸಂದರ್ಭಗಳಲ್ಲಿ ಸಹಾಯವನ್ನು ನೀಡುವಲ್ಲಿ ನಿಮ್ಮ ಬದ್ಧತೆಯ ಬಗ್ಗೆ ರಾಷ್ಟ್ರ ಹೆಮ್ಮೆಪಡುತ್ತದೆ" ಎಂದಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, "ನಮ್ಮ ಎಲ್ಲಾ ಶೌರ್ಯ ನೌಕಾಪಡೆಯ ಸಿಬ್ಬಂದಿ ಹಾಗೂ ಅವರ ಕುಟುಂಗಳಿಗೆ ನೌಕಾಪಡೆ ದಿನದ ಶುಭಾಶಯಗಳು. ಭಾರತೀಯ ನೌಕಾಪಡೆಯು ನಮ್ಮ ಕರಾವಳಿಯನ್ನು ನಿರ್ಭಯವಾಗಿ ರಕ್ಷಿಸುತ್ತದೆ ಹಾಗೂ ಅಗತ್ಯವಾದ ಸಮಯದಲ್ಲಿ ಮಾನವೀಯ ನೆರವು ನೀಡುತ್ತದೆ" ಎಂದು ಹೇಳಿದ್ದಾರೆ.
"ನೌಕಾಪಡೆ ದಿನದ ಈ ಸಂದರ್ಭ ನೌಕಾಪಡೆಯ ಸಿಬ್ಬಂದಿಗಳಿಗೆ ನನ್ನ ಶುಭಾಶಯಗಳು. ಅವರ ಶೌರ್ಯ, ಧೈರ್ಯ ಹಾಗೂ ವೃತ್ತಿಪರತೆಗೆ ನನ್ನ ವಂದನೆಗಳು" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದು, "ನಮ್ಮ ರಾಷ್ಟ್ರವನ್ನು ರಕ್ಷಿಸುವ ನಮ್ಮ ಕೆಚ್ಚೆದೆಯ ನೌಕಾಪಡೆಯ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ ನನ್ನ ಶುಭಾಶಯಗಳು" ಎಂದು ತಿಳಿಸಿದ್ದಾರೆ.
"ಸರ್ವರಿಗೂ ಭಾರತೀಯ ನೌಕಾಪಡೆ ದಿನದ ಹಾರ್ದಿಕ ಶುಭಾಶಯಗಳು. ದೇಶದ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಭಾರತೀಯ ನೌಕಾಪಡೆಯ ಯೋಧರಿಗೆ ಗೌರವ ಸಲ್ಲಿಸೋಣ" ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
"ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ದೇಶದ ಗಡಿಗಳನ್ನು ರಕ್ಷಿಸುವ ಎಲ್ಲ ಭಾರತೀಯ ಯೋಧರಿಗೂ 'ಭಾರತೀಯ ನೌಕಾ ದಿನ'ದ ಸಂದರ್ಭದಲ್ಲಿ ಕೃತಜ್ಞತೆಗಳು" ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದು, "ಸಮುದ್ರ ಗಡಿಗಳನ್ನು ರಕ್ಷಣೆ ಮಾಡುವ ಮೂಲಕ ರಾಷ್ಟ್ರವನ್ನು ಸುಭದ್ರವಾಗಿಟ್ಟಿರುವ ಭಾರತೀಯ ನೌಕಾಪಡೆಯ ಹೆಮ್ಮೆಯ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಭಾರತೀಯ ನೌಕಾ ದಿನದ ಶುಭಾಶಯಗಳು" ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟ್ವೀಟ್ ಮಾಡಿದ್ದು, "ನೌಕಾಪಡೆ ಯೋಧರ ಸೇವೆ, ತ್ಯಾಗ ಮತ್ತು ಬಲಿದಾನದಿಂದಾಗಿ ಭಾರತ ಸುರಕ್ಷಿತ ಹಾಗೂ ಸುಭದ್ರವಾಗಿದೆ. ಭಾರತೀಯ ನೌಕಾದಳ ದಿನದ ಶುಭಾಶಯಗಳು" ಎಂದಿದ್ದಾರೆ.