ನವದೆಹಲಿ, ಡಿ.04 (DaijiworldNews/PY): ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿಎಫ್ಐ ಮುಖ್ಯಸ್ಥ ಒ.ಎಂ.ಅಬ್ದುಲ್ ಸಲಾಂ, ಪಿಎಫ್ಐನ ಕೇರಳ ರಾಜ್ಯಾಧ್ಯಕ್ಷ ನಾಸಿರುದ್ದೀನ್ ಎಲಾಮರೊಮ್ ಅವರ ನಿವಾಸ ಸೇರಿ ಏಕಕಾಲದಲ್ಲಿ ಒಂಭತ್ತು ರಾಜ್ಯಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಜಾರಿ ನಿರ್ದೇಶನಾಲಯವು ಕರ್ನಾಟಕ, ತಮಿಳುನಾಡು ಸೇರಿದಂತೆ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳದ ಮಲಪ್ಪುರಂ, ನವದೆಹಲಿ ಹಾಗೂ ತಿರುವನಂತಪುರದಲ್ಲಿ ದಾಳಿ ನಡೆಸಿದ ಎಂದು ಮೂಲಗಳು ಹೇಳಿವೆ.
ಒಂಭತ್ತು ರಾಜ್ಯಗಳ 26 ಕಡೆಗಳಲ್ಲಿ ದಾಳಿ ನಡೆಸಿದ್ದು, ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕಲೆಹಾಕುವ ಸಲುವಾಗಿ ಪಿಎಂಎಲ್ಎ ಕಾಯ್ದೆಯಡಿ ಈ ದಾಳಿ ನಡೆಸಲಾಗಿದ್ದು, ಪಿಎಫ್ಐ ಮುಖ್ಯಸ್ಥ ಒ.ಎಂ.ಅಬ್ದುಲ್ ಸಲಾಂ, ಪಿಎಫ್ಐನ ಕೇರಳ ರಾಜ್ಯಾಧ್ಯಕ್ಷ ನಾಸಿರುದ್ದೀನ್ ಎಲಾಮರೊಮ್ ಅವರ ನಿವಾಸಗಳಲ್ಲಿಯೂ ಕೂಡಾ ಶೋಧ ಕಾರ್ಯ ನಡೆದಿದೆ ಎನ್ನಲಾಗಿದೆ.
ಪಿಎಫ್ಐತು ಸಿಎಎ ವಿರುದ್ಧದ ಹೋರಾಟಕ್ಕೆ ಕುಮ್ಮಕ್ಕು ನೀಡಿದ್ದು. ಹಣಕಾಸಿನ ಸಹಾಯ ಮಾಡಿದೆ ಎನ್ನುವ ಆರೋಪದಡಿ ಇಡಿ ತನಿಖೆಯಗುತ್ತಿದೆ.
"ನವದೆಹಲಿಯಲ್ಲಿ ರೈತರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಯಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಸಲುವಾಗಿ ಪಿಎಫ್ಐ ಮುಖಂಡರ ಮನೆಗಳ ಮೇಲೆ ಇಡಿ ದಾಳಿ ನಡೆಸಿದೆ. ಈ ದಾಳಿಗೆ ಕೆಂದ್ರ ಬಿಜೆಪಿ ಸರ್ಕಾರದ ಕುಮ್ಮಕ್ಕೂ ಇದೆ" ಎಂದು ಸಲಾಂ ಆರೋಪಿಸಿದ್ದಾರೆ.
"ಈ ರೀತಿಯಾದ ದಾಳಿಗಳಿಗೆ ನಾವು ಜಗ್ಗುವುದಿಲ್ಲ. ನಾವು ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುತ್ತೇವೆ" ಎಂದು ಪಿಎಫ್ಐ ತಿಳಿಸಿದೆ.