ಮಂಗಳೂರು, ಡಿ. 03 (DaijiworldNews/SM): ಚುನಾವಣೆ ಹತ್ತಿರು ಬರುವಾಗಲೇ ಗೋಡೆ ಬರಹ ಕಾಣಿಸಲು ಕಾರಣವೇನು ಎಂದು ಹಿಂದೂ ಮಹಾ ಸಭಾದ ಅಧ್ಯಕ್ಷ ಧರ್ಮೇಂದ್ರ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಪಂಚಾಯತ್ ಚುನಾವನೆಗೆ ಸಕಲ ಸಿದ್ಧತೆ ಆಗಿದ್ದು, ಶೇಕಡ 90ಕ್ಕಿಂತಲೂ ಹೆಚ್ಚಿನ ಭಾಗದಲ್ಲಿ ಗೆಲ್ಲುತ್ತೇವೆ ಎನ್ನುವ ಹೇಳಿಕೆಯನ್ನು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿದ್ದಾರೆ. ಅದರೆ, ಅವರ ಹೇಳಿಕೆಯ ಎರಡು ದಿನದ ಬಳಿಕ ಗೋಡೆ ಬರಹ ಕಾಣಿಸಿಕೊಂಡಿದೆ. ಅಂದರೆ ಚುನಾವಣೆಗೆ ಬಿಜೆಪಿ ಸಿದ್ದತೆ ಯಾವುದು? ಎಂಬುವುದಾಗಿ ಆವರು ಪ್ರಶ್ನಿಸಿದ್ದಾರೆ.
ಇನ್ನು ವಿಧಾನಸಭೆ ಚುನಾವನೆಗೆ ಹತ್ತಿರವಾಗುತ್ತಿರುವಾಗ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತದೆ. ಪಂಚಾಯತ್ ಚುನಾವಣೆಯ ಮುನ್ನ ಗೋಡೆ ಬರಹ ಕಾಣಿಸುತ್ತದೆ. ಹಾಗಿದ್ದರೆ ಇವೆಲ್ಲದರ ಉದ್ದೇಶ ಏನು ಎಂದು ಹಿಂದೂ ಮಹಾಸಭಾ ಪ್ರಶ್ನೆ ಮಾಡಿದೆ.