ನವದೆಹಲಿ,ಡಿ. 03 (DaijiworldNews/HR): ಚೀನಾ ಸೇರಿದಂತೆ ಯಾವುದೇ ದೇಶಗಳಿಂದ ಸಾಗರ ಗಡಿಯಲ್ಲಿ ಎದುರಾಗುವಂತಹ ಬೆದರಿಕೆಯನ್ನು ಎದುರಿಸಲು ನೌಕಾಪಡೆ ಸದಾ ಸಿದ್ದವಾಗಿದೆ ಎಂದು ನೌಕಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂವೀರ್ ಸಿಂಗ್ ಹೇಳಿದ್ದಾರೆ.
ಈ ಕುರಿತು ನೌಕಾಪಡೆ ದಿನದ ಅಂಗವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿಂದೂ ಮಹಾಸಾಗರ ಗಡಿಯಲ್ಲಿ ಯಾವುದೇ ದೇಶಗಳಿಂದ ಬೆದರಿಕೆ ಕಂಡು ಬಂದಲ್ಲಿ ಅದನ್ನು ನಿಭಾಯಿಸಲು ನೌಕಾಪಡೆ ಸದಾ ಸಿದ್ದವಾಗಿದೆ" ಎಂದರು.
ಇನ್ನು "ಪೂರ್ವ ಲಡಾಖ್ನಲ್ಲಿ ವಾಸ್ತವ ನಿಯಂತ್ರಣ ರೇಖೆ ಹತ್ತಿರ ಕಣ್ಗಾವಲಿಗಾಗಿ ನೌಕಾಪಡೆಯ ಪಿ-81 ಯುದ್ಧವಿಮಾನ ಹಾಗೂ ಹೆರಾನ್ ಡ್ರೋನ್ಗಳನ್ನು ನಿಯೋಜಿಸಲಾಗಿದೆ" ಎಂದು ಹೇಳಿದ್ದಾರೆ.