ನವದೆಹಲಿ,ಡಿ. 03 (DaijiworldNews/HR): ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಮತ್ತೊಂದು ಶಾಹೀನ್ಭಾಗ್ ರೀತಿಯ ಪ್ರತಿಭಟನೆಗಳನ್ನಾಗಿ ಪರಿವರ್ತಿಸಲು ತುಕಡೆ ತುಕಡೆ ಗ್ಯಾಂಗ್ ಎಂದು ಕರೆಸಿಕೊಳ್ಳುವ ಕೆಲವು ಪ್ರತಿಭಟನಾಕಾರರು ಪ್ರಯತ್ನಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕೆಲವರು ಖಾಲಿಸ್ತಾನ ಪರವಾಗಿ ಘೋಷಣೆಗಳನ್ನು ಕೂಗುತ್ತಾ, ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯೋಚಿತ ಪಿತೂರಿ ನಡೆಸುತ್ತಿದ್ದಾರೆ" ಎಂದರು.
ಇನ್ನು "ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಶಾಹೀನ್ಬಾಗ್ನಲ್ಲಿ ಪ್ರತಿಭಟನೆ ನಡೆಸಿದ ಗುಂಪುಗಳು ಮತ್ತು ಕೆಲವು ವ್ಯಕ್ತಿಗಳು ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ನೆಪದಲ್ಲಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.