ಮಡಿಕೇರಿ, ಡಿ.03 (DaijiworldNews/MB) : ''ಸಾಲ, ಬೆಳೆ ನಾಶ ಮೊದಲಾದ ಕಾರಣಕ್ಕೆ ಆತಂಕಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು'' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಪೊನ್ನಂಪೇಟೆಯ ಸಮೀಪದ ಕೃಷಿ ಕಾಲೇಜಿನಲ್ಲಿ ಗುರುವಾರ 'ಬಿದಿರು ಸಂಸ್ಕರಣೆ ಹಾಗೂ ಬಿದುರು ಮೌಲ್ಯವರ್ಧನಾ ಘಟಕ' ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ''ಕೃಷಿ ಮಾಡಿ ಉತ್ತಮವಾಗಿ ಜೀವನ ನಡೆಸುವವರೂ ಇದ್ದಾರೆ. ಆದರೆ ಹೇಡಿಗಳು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ'' ಎಂದರು.
''ತಮ್ಮ ಪತ್ನಿ, ಮಕ್ಕಳನ್ನು ನೋಡಿಕೊಳ್ಳದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತ ಹೇಡಿ. ನಮ್ಮಲ್ಲಿ ಬದುಕಿ ಸಾಧಿಸುವ ಗುಣವಿರಬೇಕು'' ಎಂದು ಹೇಳಿದರು.
ಇನ್ನು ''ಕೃಷಿ ಕ್ಷೇತ್ರದಲ್ಲಿ ನಾವು ಅಭಿವೃದ್ದಿ ಹೊಂದಬೇಕಾದರೆ ನಮಗೆ ಇಸ್ರೇಲ್ ಮಾದರಿ ಬೇಕಾಗಿಲ್ಲ. ಕೋಲಾರ ಜಿಲ್ಲೆಯ ಮಾದರಿ ಅಳವಡಿಸಿಕೊಂಡರೆಯೇ ರೈತರ ಆತ್ಮಹತ್ಯೆ ತಡೆಯಬಹುದು'' ಎಂದರು.