ಲಕ್ನೋ, ಡಿ. 03 (DaijiworldNews/HR): ಲಕ್ನೋದ ರಮಾಬಾಯ್ ಅಂಬೇಡ್ಕರ್ ಮೈದಾನದಲ್ಲಿ ಉತ್ತರಪ್ರದೇಶದ 11 ವಿಧಾನಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಬಿಗಿ ಭದ್ರತೆ ನಡುವೆ ಆರಂಭಗೊಂಡಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಮತಎಣಿಕೆ ಹಿನ್ನೆಲೆಯಲ್ಲಿ ಗಡಿಭದ್ರತಾ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಮತಪೆಟ್ಟಿಗೆ ಇಟ್ಟಿರುವ ಭದ್ರತಾ ಕೊಠಡಿ ಮತ್ತು ಆವರಣದ ಸುತ್ತಲೂ ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿತ್ತು.
ಇನ್ನುಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಮತಎಣಿಕೆಗೆ 14 ಸುತ್ತು ನಡೆಯಲಿದ್ದು, ಮಧ್ಯಾಹ್ನದೊಳಗೆ 11 ಎಂಎಲ್ ಸಿ ಕ್ಷೇತ್ರಗಳ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.