ಬೆಂಗಳೂರು,ಡಿ.03 (DaijiworldNews/HR): ಇಂದಿರಾ ಕ್ಯಾಂಟೀನ್ನನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದ್ದು, ಅದನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
"ಇಂದಿರಾ ಕ್ಯಾಂಟೀನ್ಗಳಿಗೆ ಕಳಿಸಬೇಕಾದ ಹಣವನ್ನು ರಾಜ್ಯ ಸರ್ಕಾರ ನಿಗದಿತವಾಗಿ ಬಿಡುಗಡೆ ಮಾಡುತ್ತಿಲ್ಲ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕ್ಯಾಂಟೀನ್ಗಳಿಗೆ ಸುಮಾರು 28 ಕೋಟಿಯನ್ನು ಬಿಡಗಡೆ ಮಾಡದೆ ಆರು ತಿಂಗಳುಗಳಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಅಷ್ಟೆ ಅಲ್ಲದೆ 12 ಅಡುಗೆ ಮನೆಗಳಿಗೂ ನೀರಿನ ಸಂಪರ್ಕವನ್ನು ನಿಲ್ಲಿಸಲಾಗಿದೆ" ಎಂದು ಪತ್ರದಲ್ಲಿ ಬರೆದಿದ್ದಾರೆ.
ಇನ್ನು "ಕೊರೊನಾ ಸಮಯದಲ್ಲಿ ಕೆಲಸ ಇಲ್ಲದ ಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಆಹಾರ ನೀಡಬೇಕೆಂದು ಈ ಹಿಂದೆ ನಾನು ಒತ್ತಾಯಿಸಿದ್ದೆ. ಇದಕ್ಕೆ ಸುಮಾರು 200 ಕೋಟಿಯಿಂದ 250 ಕೋಟಿ ಖರ್ಚು ಆಗಿರಬಹುದು, ಹಸಿದವರ ಹೊಟ್ಟೆ ತುಂಬಿಸಲು ರಾಜ್ಯ ಸರ್ಕಾರ ಪ್ರಯತ್ನಿಸಿದೆ ಮೀನಮೇಷ ಎನಿಸುತ್ತಿದೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.