ಮೈಸೂರು, ಡಿ.03 (DaijiworldNews/HR): ಗ್ರಾಮ ಸ್ವರಾಜ್ ಹೆಸರಿಯಲ್ಲಿ ಪ್ರತಿ ತಾಲ್ಲೂಕುಗಳಲ್ಲಿ ಸಭೆಗಳನ್ನು ಬಿಜೆಪಿಯವರು ನಡೆಸುತ್ತಿದ್ದು, ಇದು ಎಂದಿಗೂ ವರ್ಕೌಟ್ ಆಗುವುದಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, " ಬಿಜೆಪಿಯವರು ಗ್ರಾಮ ಸ್ವರಾಜ್ ಹೆಸರಿಯಲ್ಲಿ ನಡೆಸುತ್ತಿರುವ ಸಭೆ ಕರೆಯುತ್ತಿದ್ದಾರೆ ಆದರೆ ಇದು ಎಂದಿಗೂ ವರ್ಕೌಟ್ ಆಗುವುದಿಲ್ಲ" ಎಂದರು.
ಇನ್ನು "ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಿಂತ ಗ್ರಾಮ ಪಂಚಾಯಿತಿ ಚುನಾವಣೆ ಸಂಪೂರ್ಣ ವಿಭಿನ್ನವಾಗಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯು ರಾಜಕೀಯ ಪಕ್ಷದ ಚಿಹ್ನೆಯಡಿ ನಡೆಯುದಿಲ್ಲ, ಅದು ಒಂದೇ ಪಕ್ಷದ 2–3 ಜನ ನಿಲ್ಲುತ್ತಾರೆ ಅಥವಾ ಒಂದೇ ಕುಟಂಬದ ಇಬ್ಬರು ಕೂಡ ನಿಲ್ಲಬಹುದು" ಎಂದರು.
ದೆಹಲಿ ಚಲೋ ಕುರಿತು ಮಾತನಾಡಿದ ಅವರು, "ರೈತರು ಕಳೆದ ಒಂದು ವಾರದಿಂದ ಚಳಿಯನ್ನು ಲೆಕ್ಕಿಸದೆ ಬೀದಿಯಲ್ಲಿ ಮಲಗುತ್ತಿದಾರೆ, ಆದರೆ ಪ್ರಧಾನಿ ಮೋದಿ ಅವರು ವಾರಾಣಸಿಯಲ್ಲಿ ದೀಪ ಹಚ್ಚುವ ಕೆಲಸ ಮಾಡಿದ್ದಾರೆ. ಅದರ ಬದಲು ರೈತರ ಕುಟುಂಬಗಳಿಗೆ ಬೆಳಕು ಕೊಡುವ ಕೆಲಸ ಮಾಡಲಿ" ಎಂದು ಹೇಳಿದ್ದಾರೆ.