ಮುಂಬೈ, ಡಿ.02 (DaijiworldNews/PY): ವಿಶೇಷ ಎಸ್ಡಿಪಿಎಸ್ ನ್ಯಾಯಾಲಯವು, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ಶೋವಿಕ್ ಚಕ್ರವರ್ತಿಗೆ ಜಾಮೀನು ಮಂಜೂರು ಮಾಡಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸೋದರ ಶೋವಿಕ್ ಚಕ್ರವರ್ತಿಯನ್ನು ಎನ್ಸಿಬಿ ಬಂಧಿಸಿತ್ತು. ನಟ ಸುಶಾಂತ್ ಸಿಂಗ್ ರಜಪೂತ್ಗೆ ನಟಿ ರಿಯಾ ಚಕ್ರವರ್ತಿ ಶೋವಿಕ್ ಚಕ್ರವರ್ತಿಯ ಮೂಲಕ ಡ್ರಗ್ಸ್ ಖರೀದಿ ಮಾಡಿ ನೀಡುತ್ತಿದ್ದರು ಎಂದು ಈ ಹಿಂದೆ ನ್ಯಾಯಾಲಯಕ್ಕೆ ಎಸ್ಸಿಬಿ ಹೇಳಿತ್ತು.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ನಲ್ಲಿ ಬಂಧನಕ್ಕೊಳಗಾಗಿದ್ದ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಅ.7ರಂದು ಜಾಮೀನು ನೀಡಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಸ್ಯಾಮುವೆಲ್ ಮಿರಾಂಡಾ ಹಾಗೂ ದೀಪೇಶ್ ಸಾವಂತ್ ಅವರಿಗೂ ಕೂಡಾ ಜಾಮೀನು ನೀಡಲಾಗಿತ್ತು. ಆ ಸಂದರ್ಭ ರಿಯಾ ಚಕ್ರವರ್ತಿ ಸೋದರ ಶೋವಿಕ್ ಚಕ್ರವರ್ತಿಗೆ ಜಾಮೀನು ನೀಡಲು ನಿರಾಕರಿಸಿತ್ತು.
ಶೋವಿಕ್ ಚಕ್ರವರ್ತಿಗೆ ಬುಧವಾರ ಎಸ್ಡಿಪಿಎಸ್ ನ್ಯಾಯಾಲಯ ಜಾಮೀನು ನೀಡಿದೆ.