ನವದೆಹಲಿ, ಡಿ.02 (DaijiworldNews/MB) : ಬಾಲಿವುಡ್ ನಟ ಮತ್ತು ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಾನು ಕರೋನಾ ಪರೀಕ್ಷೆಯನ್ನು ಮಾಡಿಸಿದ್ದು ವರದಿಯು ಪಾಸಿಟಿವ್ ಆಗಿದೆ. ನನ್ನ ಆರೋಗ್ಯ ಚೆನ್ನಾಗಿದ್ದು ನಾನು ಪ್ರತ್ಯೇಕವಾಗಿರುತ್ತೇನೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದ ನಿಮ್ಮೆಲ್ಲರಲ್ಲೂ ಕ್ವಾರಂಟೈನ್ನಲ್ಲಿ ಇರುವಂತೆ ವಿನಂತಿಸುತ್ತೇನೆ. ಹಾಗೆಯೇ ನಿಮ್ಮ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮುಖೇನ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯದರ್ಶಿ ಅಮಿತಾಬ್ ಅವಸ್ತಿ, ಜಿಲ್ಲಾ ಮುಖ್ಯ ವೈದ್ಯಾಧಿಕಾರಿಯಿಂದ ಲಭ್ಯವಾದ ಮಾಹಿತಿಯಂತೆ ಸನ್ನಿ ಡಿಯೋಲ್ ಅವರು ತನ್ನ ಸ್ನೇಹಿತರೊಂದಿಗೆ ಮುಂಬೈಗೆ ತೆರಳಲಿದ್ದರು. ಆದರೆ ಅವರಿಗೆ ಕೊರೊನಾ ಪಾಸಿಟಿವ್ ಆದ ಕಾರಣ ಅವರು ಸದ್ಯ ಮುಂಬೈಗೆ ಹೋಗದೆ ಕುಲು ಜಿಲ್ಲೆಯಲ್ಲೇ ಇರಲಿದ್ದಾರೆ ಎಂದು ತಿಳಿಸಿದ್ದಾರೆ.