ಬೆಂಗಳೂರು, ಡಿ.02 (DaijiworldNews/MB) : ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯ ಗ್ಯಾಂಗ್ ತನ್ನ ಚಾಲಕನೊಂದಿಗೆ ತನ್ನನ್ನು ಅಪಹರಿಸಿತ್ತು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಆರೋಪಿಸಿ ಈ ಬಗ್ಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ದುಷ್ಕರ್ಮಿಗಳ ತಂಡವು ನಮ್ಮಿಬ್ಬರ ಮೇಲೂ ಹಲ್ಲೆ ನಡೆಸಿ 30 ಕೋಟಿ ರೂ. ನೀಡುವಂತೆ ಒತ್ತಾಯಿಸಿದೆ. ಆದರೆ ತನ್ನನ್ನು ಬಿಡುಗಡೆ ಮಾಡಲಿ ಎಂಬ ಕಾರಣಕ್ಕೆ ತಾನು ಅಪಹರಣಕಾರರ ತಂಡಕ್ಕೆ 48 ಲಕ್ಷ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 25 ರಂದು ಕೋಲಾರ ಜಿಲ್ಲೆಯ ಬೆಗ್ಲಿ ಹೊಸಹಳ್ಳಿಯಲ್ಲಿರುವ ತನ್ನ ತೋಟದ ಮನೆಯಿಂದ ನಗರದಲ್ಲಿರುವ ತನ್ನ ನಿವಾಸಕ್ಕೆ ವಾಪಾಸ್ ಬರುತ್ತಿದ್ದ ಸಂದರ್ಭದಲ್ಲಿ ಆ ತಂಡವು ನಮ್ಮನ್ನು ಅಪಹರಿಸಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.
"ನಮ್ಮನ್ನು ಮೂರು ದಿನಗಳ ಕಾಲ ಅಪರಿಚಿತ ಸ್ಥಳದಲ್ಲಿ ಇರಿಸಲಾಗಿತ್ತು. ನಮ್ಮ ಮೇಲೆ ಹಲ್ಲೆ ನಡೆಸಿ 30 ಕೋಟಿ ರೂ. ನೀಡುಬೇಕು ಎಂದು ಅಪಹರಣಕಾರರು ಹೇಳಿದರು. ಇಲ್ಲದಿದ್ದರೆ ನಿಮ್ಮನ್ನು ಸುರಕ್ಷಿತವಾಗಿ ಹಿಂದಕ್ಕೆ ಕಳಿಹಿಸುವುದಿಲ್ಲ ಎಂದು ಬೆದರಿಕೆ ಹಾಕಿದರು ಎಂದು ಡಿಸೆಂಬರ್ 1 ರ ಮಂಗಳವಾರ ಸಂಜೆ 7 ಗಂಟೆಗೆ ಪ್ರಕಾಶ್ ಅವರು
ನಮ್ಮ ಮೇಲೆ ಹಲ್ಲೆ ನಡೆಸಿ 30 ಕೋಟಿ ರೂ. ಪಾವತಿಸದಿದ್ದರೆ ನಾವು ಸುರಕ್ಷಿತವಾಗಿರಲು ಸಾಧ್ಯವಾಗುವುದಿಲ್ಲ ಎಂದು ಬೆದರಿಕೆ ಹಾಕಲಾಯಿತು. ಪ್ರಕಾಶ್ ಅವರು ಡಿಸೆಂಬರ್ 1 ರ ಮಂಗಳವಾರ ಸಂಜೆ 7 ಗಂಟೆಗೆ ಬೆಳ್ಳಂದೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ತಮ್ಮ ಅಪಹರಣಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರು ದಾಖಲಿಸಿದ್ದಾರೆ.
''ಪ್ರಕಾಶ್ ಅವರ ದೂರಿನ ಪ್ರಕಾರ ಅಪಹರಣಕಾರರು ಅವರನ್ನು ನವೆಂಬರ್ 28 ರಂದು ಬಿಡುಗಡೆ ಮಾಡಿದ್ದು ಈ ಬಗ್ಗೆ ಪೊಲೀಸರಿಗೆ ನಾಲ್ಕು ದಿನ ತಡವಾಗಿ ಯಾಕೆ ದೂರು ನೀಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಸುಲಿಗೆಗಾಗಿ ಅಪಹರಣ ಮತ್ತು ಹಲ್ಲೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ'' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.