ನವದೆಹಲಿ, ಡಿ.02 (DaijiworldNews/MB) : ಕೇಂದ್ರದ ಕೃಷಿ ಮಸೂದೆಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಂಜಾಬ್ ರಾಜ್ಯದ ರೈತರು ಕೂಡಾ ಇರುವುದರಿಂದ ಉತ್ತರ ರೈಲ್ವೆ ವಿಭಾಗದ ಕೆಲವು ರೈಲುಗಳ ಸಂಚಾರವನ್ನು ಬದಲಾಯಿಸಲಾಗಿದೆ. ಹಾಗೆಯೇ ಇನ್ನೂ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಇಂದು ಸಂಚರಿಸಬೇಕಾಗಿದ್ದ ಅಜ್ಮರ್-ಅಮೃತಸರ 09613 ವಿಶೇಷ ರೈಲು, ನಾಳೆ ಸಂಚಾರ ನಡೆಸಬೇಕಾಗಿದ್ದ ಅಮೃತಸರ-ಅಜ್ಮರ್ ವಿಶೇಷ ರೈಲು ಸಂಖ್ಯೆ 09612, ದಿಬ್ರುಗರ್-ಅಮೃತಸರ ಎಕ್ಸ್ ಪ್ರೆಸ್ ವಿಶೇಷ ರೈಲು ಸಂಖ್ಯೆ 05211, ಅಮೃತಸರ-ದಿಬ್ರುಗರ್ ವಿಶೇಷ ರೈಲು ಸಂಖ್ಯೆ 05212 ರೈಲುಗಳ ಸಂಚಾರ ರದ್ದಾಗಿದೆ. ಹಾಗೆಯೇ ಬಟಿಂಡಾ-ವಾರಣಾಸಿ-ಬಟಿಂಡಾ ಎಕ್ಸ್ ಪ್ರೆಸ್ ವಿಶೇಷ ರೈಲು ಕೂಡ ಮುಂದಿನ ಆದೇಶದವರೆಗೆ ರದ್ದಾಗಿದೆ.