ನವದೆಹಲಿ,ಡಿ. 01 (DaijiworldNews/HR): ನವೆಂಬರ್ ತಿಂಗಳಲ್ಲಿ ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ 1.04 ಲಕ್ಷ ಕೋಟಿ ಆದಾಯ ಸಂಗ್ರಹ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಈ ಹಣಕಾಸು ವರ್ಷದಲ್ಲಿ ಜಿಎಸ್ಟಿ ಸಂಗ್ರಹವು ಇದೇ ಮೊದಲ ಬಾರಿಗೆ ಎರಡು ತಿಂಗಳುಗಳಿಂದ ಸತತವಾಗಿ ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಮಟ್ಟದಲ್ಲಿದೆ.
ನವೆಂಬರ್ ತಿಂಗಳಿನಲ್ಲಿ ಉತ್ಪನ್ನಗಳ ಆಮದಿನಿಂದ ಬಂದಿರುವ ಆದಾಯ ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಶೇಕಡ 4.9ರಷ್ಟು ಹೆಚ್ಚು ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಲಾಕ್ಡೌನ್ ನಿಯಮಗಳು ಕಠಿಣವಾಗಿದ್ದ ಏಪ್ರಿಲ್ ತಿಂಗಳಲ್ಲಿ ಜಿಎಸ್ಟಿ ವ್ಯವಸ್ಥೆಯ ಮೂಲಕ ಕೇವಲ 32,172 ಕೋಟಿ ಸಂಗ್ರಹ ಆಗಿತ್ತು. ಅದಾದ ನಂತರ, ಲಾಕ್ಡೌನ್ ಸಡಿಲಿಕೆ ಬಳಿಕ ಜಿಎಸ್ಟಿ ಸಂಗ್ರಹ ಆಗುತ್ತಿರುವ ಮೊತ್ತದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ತಿಳಿಸಿದೆ.