ನವದೆಹಲಿ, ಡಿ. 01 (DaijiworldNews/HR): ಪ್ರಕರಣವೊಂದರ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸುವ ವೇಳೆ ಶರ್ಟ್ ಧರಿಸದೇ ಬಂದಿದ್ದ ವ್ಯಕ್ತಿಯನ್ನು ಪರದೆಯ ಮೇಲೆ ನೋಡಿ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ವಿಡಿಯೊ ಕಾನ್ಫೆರನ್ಸ್ ಮೂಲಕ ವಿಚಾರಣೆ ನಡೆಸುವಾಗ ಏಳೆಂಟು ತಿಂಗಳಿನಿಂದ ಇದೇ ರೀತಿ ಸಂಗತಿಗಳು ಮರುಕಳಿಸುತ್ತಿವೆ' ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂದು ಎಚ್ಚರಿಸಿದೆ.
ಇನ್ನು "ನಾನು ಯಾರ ಬಗ್ಗೆಯೂ ಕಠಿಣವಾಗಿ ನಡೆದುಕೊಳ್ಳಲು ಇಷ್ಟಪಡುವುದಿಲ್ಲ, ಆದರೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ನೀವು ಎಚ್ಚರಿಕೆ ವಹಿಸಬೇಕು" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.