ಲಖನೌ, ಡಿ. 01 (DaijiworldNews/HR): ರೌಡಿಶೀಟರ್ ವಿಕಾಸ್ ದುಬೆ ಮತ್ತು ಆತನ ಲೆಕ್ಕಿಗನ 150 ಕೋಟಿ ಮೌಲ್ಯದ ಆಸ್ತಿಯ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನ್ಪುರದಲ್ಲಿ ವಿಕಾಸ್ ದುಬೆ ನಡೆಸಿದ ದಾಳಿಯಲ್ಲಿ 8 ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದು, ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ಮೂವರು ಎಸ್ಐಟಿ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ವಿಕಾಸ್ ದುಬೆ ಮತ್ತು ಆತನ ಲೆಕ್ಕಿಗನ 150 ಕೋಟಿ ಮೌಲ್ಯದ ಆಸ್ತಿಯ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ಶಿಫಾರಸು ಮಾಡಿದ್ದು, ಜೊತೆಗೆ ವಿಕಾಸ್ ದುಬೆಗೆ ಸಹಾಯ ಮಾಡಿದ ಗ್ರಾಮಾಭಿವೃದ್ಧಿ ಆಹಾರ ಮತ್ತು ಕಂದಾಯ ಹಾಗೂ ಪೊಲೀಸ್ ಇಲಾಖೆಯ 90 ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆಯೂ ಸಲಹೆ ನೀಡಿದೆ.