ನವದೆಹಲಿ, ಡಿ.01 (DaijiworldNews/PY): "ಕೇಂದ್ರ ಸರ್ಕಾರ ಮೊದಲು ದುರಂಹಾರಕಾರವನ್ನು ಬಿಟ್ಟು, ರೈತರ ಪ್ರತಿಭಟನೆಗೆ ಸ್ಪಂದಿಸಲಿ. ರೈತರಿಗೆ ಅವರ ಹಕ್ಕುಗಳನ್ನು ಒದಗಿಸಬೇಕು" ಎಂದು ಕಾಂಗ್ರೆಸ್ ನಾಯಕ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರೈತರ ಕಠಿಣ ಪರಿಶ್ರಮಕ್ಕಾಗಿ ನಾವೆಲ್ಲರೂ ಋಣಿಯಾಗಿದ್ದೇವೆ. ಅವರಿಗೆ ನ್ಯಾಯ ಒದಗಿಸುವ ಮೂಲಕ ಮಾತ್ರ ಈ ಋಭವನ್ನು ತೀರಿಸಲು ಸಾಧ್ಯ" ಎಂದಿದ್ದಾರೆ.
"ರೈತರು ರಸ್ತೆ, ಹೊಲಗಳಲ್ಲಿ ಕುಳಿತು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವೆಲ್ಲರೂ ಕೂಡಾ ರೈತರ ಕಠಿಣ ಪರಿಶ್ರಮಕ್ಕೆ ಋಣಿಯಾಗಿದ್ದೇವೆ. ನ್ಯಾಯ ಸಲ್ಲಿಸುವ ಮೂಲಕ ನಾವು ಅವರ ಋಣವನ್ನು ತೀರಿಸಬೇಕು. ಇದರ ಬದಲಾಗಿ ಅವರಿಗೆ ಲಾಠಿಯಿಂದ ಹೊಡೆದು, ಆಶ್ರುವಾಯು ಬಳಸುವ ಮೂಲಕ ಅವರ ಮೇಲೆ ದೌರ್ಜನ್ಯವೆಸಗುವುದು ಸರಿಯಲ್ಲ" ಎಂದು ತಿಳಿಸಿದ್ದಾರೆ.
"ಮೊದಲು ಎಚ್ಚರಗೊಂಡು ದುರಹಂಕಾರದ ಕುರ್ಚಿಯಿಂದ ಕೆಳಗಿಳಿದು ರೈತರಿಗೆ ಅವರ ಹಕ್ಕುಗಳನ್ನು ನೀಡುವ ಬಗ್ಗೆ ಯೋಚಿಸಿ" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ಕೆಲವು ದಿನಗಳಿಂದ ನೂರಾರು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.