ಮುಂಬೈ,ಡಿ. 01 (DaijiworldNews/HR): ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯಲ್ಲಿ ಎನ್ಸಿಪಿ ಕಾರ್ಯಕರ್ತೆಯೊಬ್ಬರನ್ನು ಬೈಕ್ ಸವಾರರಿಬ್ಬರು ಗಂಟಲು ಕತ್ತರಿಸಿ ಹತ್ಯೆಗೈದ ಘಟನೆ ನಡೆದಿದೆ.
ಎನ್ಸಿಪಿ ಕಾರ್ಯಕರ್ತೆ ರೇಖಾ ಬಾಹುಸಾಹೇಬ್ ಜಾರೆ ಅವರು ಸೋಮವಾರ ರಾತ್ರಿ 8.20ರ ಸುಮಾರಿಗೆ ತನ್ನ ತಾಯಿ, ಮಗ ಮತ್ತು ಸ್ನೇಹಿತೆಯೊಂದಿಗೆ ಪುಣೆಯಿಂದ ಅಹ್ಮದ್ನಗರಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ಸವಾರರಿಬ್ಬರು ಪಾರ್ನರ್ನ ಜಟಗಾಂವ್ ಘಾಟ್ನಲ್ಲಿ ರೇಖಾ ಅವರ ಕಾರನ್ನು ತಡೆದು, ಬಳಿಕ ಆರೋಪಿಗಳು ಮತ್ತು ರೇಖಾ ಅವರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿಯೊಬ್ಬ ರೇಖಾ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಗಂಟಲು ಕತ್ತರಿಸಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ.
ಅಹ್ಮದ್ನಗರ ಸುಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.