ಮುಂಬೈ, ಡಿ. 01 (DaijiworldNews/HR): ಭಗವತ್ ಗೀತಾ ಪಠಣ ಸ್ಪರ್ಧೆಯ ಮಾದರಿಯಲ್ಲಿ ಅಜಾನ್ ಪಠಣ ಸ್ಪರ್ಧೆಯನ್ನು ನಡೆಸಬೇಕೆಂದು ಶಿವಸೇನೆಯ ದಕ್ಷಿಣ ಮುಂಬೈ ವಲಯ ಮುಖ್ಯಸ್ಥ ಪಾಂಡುರಂಗ ಸಕ್ಪಾಲ್ ಹೇಳಿಕೊಂಡಿದ್ದು, ಇದು ಶಿವಸೇನೆಯು ಮುಸ್ಲಿಮರನ್ನು ಓಲೈಸಲು ನಡೆಯುತ್ತಿರುವ ಪ್ರಯತ್ನವಾಗಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಈ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ಬಿಜೆಪಿಯ ಪರ್ವೀನ್ ದಾರೇಕರ್ ಅವರು, "ಪಾಂಡುರಂಗ ಸಕ್ಪಾಲ್ ಅವರು ಮುಸ್ಲಿಮರನ್ನು ಓಲೈಸುವ ಪ್ರಯತ್ನದಲ್ಲಿ ಬಾಳಾಸಾಹೇಬ್ ಠಾಕ್ರೆಯವರ ಸಿದ್ಧಾಂತವನ್ನು ಬಿಟ್ಟುಕೊಟ್ಟಿದ್ದಾರೆ. ಬಾಳಾಸಾಹೇಬರು ಮಸೀದಿಗಳಲ್ಲಿ ನಮಾಜ್ ಕೂಗುವ ಸಲುವಾಗಿ ಧ್ವನಿವರ್ದಕಗಳನ್ನು ಬಳಸುವುದನ್ನು ವಿರೋಧಿಸುತ್ತಿದ್ದರು. ಆದರೆ ಇಂದು ಪಕ್ಷವು ವೋಟ್ ಬ್ಯಾಂಕ್ ಸಲುವಾಗಿ ಹಿಂದುತ್ವದ ವಿಚಾರದಲ್ಲಿ ಗೊಂದಲಕ್ಕೀಡಾಗಿದೆ" ಎಂಅದರು.
ಇನ್ನು ದಕ್ಷಿಣ ಮುಂಬೈನಲ್ಲಿ ಶಾಲೆಯ ಮಕ್ಕಳಿಗಾಗಿ ಆಜಾನ್ ಪಠಣ ಸ್ಪರ್ಧೆಯನ್ನು ಏರ್ಪಡಿಸಬೇಕು ಮತ್ತು ಧಾರ್ಮಿಕ ಪವಿತ್ರ ಆಜಾನ್ ಪಠಣ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಇದರ ಹಿಂದಿನ ಉದ್ದೇಶ ಜೊತೆಗೆ, ಆಜಾನ್ ಪಠಣದ ಶಬ್ದವು ಸುಮಧುರವಾಗಿದ್ದು, ತಾವು ಆ ಬಗ್ಗೆ ಯಾವಾಗಲೂ ಕೌತುಕರಾಗಿರುವುದಾಗಿಯೂ ಪಾಂಡುರಂಗ ಸಕ್ಪಾಲ್ ಹೇಳಿದ್ದರು.