ಶ್ರೀನಗರ, ನ.30 (DaijiworldNews/PY): "ಕುಪ್ವಾರಾದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಉಗ್ರನನ್ನು ಜಮ್ಮು-ಕಾಶ್ಮೀರದ ಪೊಲೀಸರು ಸೋಮವಾರ ಬಂಧಿಸಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಬಂಧಿತ ಉಗ್ರನಿಂದ ಗ್ರೆನೇಡ್ ಹಾಗೂ ಸುಮಾರು 3.50 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ಪೊಲೀಸ್ ಮೂಲಗಳು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಭದ್ರತಾ ಪಡೆಗಳು ನ.19ರಂದು ಜಮ್ಮು-ಕಾಶ್ಮೀರದ ನಗ್ರೋಟಾದಲ್ಲಿ ನಡೆಸಿದ್ದ ಎನ್ಕೌಂಟರ್ಗೆ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ನಾಲ್ವರು ಉಗ್ರರನ್ನು ಸದೆಬಡೆದಿದ್ದು, ಉಗ್ರರಿಂದ 11 ಎಕೆ 47 ರೈಫಲ್ಸ್, 3 ಪಿಸ್ತೂಲ್, 29 ಗ್ರೆನೇಡ್ಸ್ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿತ್ತು" ಎಂದು ವರದಿ ವಿವರಿಸಿದೆ.