ಕೋಲ್ಕತ್ತ, ನ. 30 (DaijiworldNews/HR): ನನ್ನ ಕ್ಷೇತ್ರ ನಂದಿಗ್ರಾಮದ ಜನತೆಯೊಂದಿಗೇ ನಾನು ಸದಾ ಇರುತ್ತೇನೆ ಎಂದು ಟಿಎಂಸಿ ಶಾಸಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ಈ ಕುರಿತು ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನನ್ನ ಕ್ಷೇತ್ರ ನಂದಿಗ್ರಾಮದ ಜನತೆಯೊಂದಿಗೇ ನಾನು ಸದಾ ಇರುತ್ತೇನೆ, ಅವರ ಸಹಾಯಕ್ಕೆ ಎಂದಿಗೂ ಮುಂದಿರುವೆ" ಎಂದರು.
ಇನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮುನಿಸಿಕೊಂಡು ಇತ್ತೀಚೆಗೆ ಸುವೇಂದು ಅಧಿಕಾರಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಅವರು ಬಿಜೆಪಿಗೆ ಸೇರ್ಪಡೆಯಾಗುವರು ಎಂಬ ವದಂತಿಗಳೂ ಕೇಳಿಬರುತ್ತಿದ್ದವು ಆದರೆ ಈ ಬಗ್ಗೆ ಸುವೇಂದು ಅವರು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸಿಲ್ಲ.