ಬೆಂಗಳೂರು, ನ.30 (DaijiworldNews/PY): ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಎ.ಎಚ್.ವಿಶ್ವನಾಥ್ ಅವರಿಗೆ ಹೈಕೋರ್ಟ್ ಆಘಾತ ನೀಡಿದ್ದು, "ಚುನಾವಣೆಯಲ್ಲಿ ಸೋತು, ವಿಧಾನಪರಿಷತ್ಗೆ ನಿರ್ದೇಶನಗೊಂಡು ಸದಸ್ಯರಾದ ಕಾರಣ ಅವರಿಗೆ ಸಚಿವರಾಗಲು ಸಾಧ್ಯವಿಲ್ಲ" ಎಂದು ಹೈಕೋರ್ಟ್ ತಿಳಿಸಿದೆ.
"ವಿಧಾನಸಭೆಯಿಂದ ಚುನಾವಣೆ ಮುಖೇನ ಪರಿಷತ್ಗೆ ಆಯ್ಕೆಯಾದ ಎಂಟಿಬಿ ನಾಗರಾಜ್ ಹಾಗೂ ಆರ್ ಶಂಕರ್ ಅವರಿಗೆ ಸಚಿವರಾಗಲು ಯಾವುದೇ ತೊಂದರೆ ಇಲ್ಲ" ಎಂದು ಕೋರ್ಟ್ ತಿಳಿಸಿದೆ.
"ಸಂವಿಧಾನದಡಿ ಮರು ಆಯ್ಕೆ ಆಗಿರುವ ಕಾರಣ ಅನರ್ಹತೆ ಇಲ್ಲ" ಎಂದು ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.