ಬೆಂಗಳೂರು, ನ. 30 (DaijiworldNews/HR): ಸರ್ಕಾರದಿಂದ ದೊರೆಯುವ ಎಲ್ಲಾ ಸೇವೆಗಳನ್ನು ಪಡೆದುಕೊಳ್ಳುವುದು ಮತ್ತು ಸೇವೆಗಳು ವಿಲಂಬವಾದಲ್ಲಿ ಆ ಬಗ್ಗೆ ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕಾಗಿರುವುದರಿಂದ ನಾಗರಿಕರು ಈ ಕುರಿತು ಹೆಚ್ಚು ಜಾಗೃತರಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ನ.30 ರಿಂದ ಡಿ. 5ರವರಗೆ ನಡೆಯುವ ಸಕಾಲ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಕೊರೊನಾದ ಬಳಿಕ ಸಕಾಲ ಸೇವೆಗಳಲ್ಲಿ ಸ್ವಲ್ಪ ವ್ಯತ್ಯಸವಾಗಿದ್ದು, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಗಳನ್ನು ಪಡೆಯಲು ಅನುವಾಗುವಂತೆ ಸಕಾಲ ಸೇವೆಗಳ ಕುರಿತು ಜಾಗೃತಿ ಮೂಡಿಸಲು ಸಪ್ತಾಹ ಆಚರಿಸಲಾಗುತ್ತಿದೆ" ಎಂದರು.
ಇನ್ನು ಅಧಿಕಾರಿಗಳು ಯಾವುದೇ ಸೇವೆಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು, ವಿಳಂಬದಿಂದ ಸಕಾಲದ ಯೋಜನೆಯ ಉದ್ದೇಶರ್ಥವಾಗುತ್ತದೆ. ಅರ್ಜಿ ನಿರಾಕರಿಸುವುದು, ಸಕಾಲ ಯೋಜನೆ ಮೂಲಕ ಅರ್ಜಿ ಸ್ವೀಕರಿಸದೇ ಇರುವುದು, ವಿನಾಕಾರಣ ಹೇಳಿದ್ದಾರೆ.