ರಾಯಚೂರು, ನ. 30 (DaijiworldNews/HR): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನಿಯೇ ಇಲ್ಲ, ಇನ್ನು ಎರಡೂವರೆ ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಅಧಿಕಾರ ಪೂರೈಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಹೇಳುತ್ತಿರುವ ಮಾತುಗಳೆಲ್ಲ ಸುಳ್ಲು, ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯನ್ನು ಕೂಡ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿಯೇ ಎದುರಿಸುತ್ತೇವೆ. ಅವರು ಹಿರಿಯರು. ಹೀಗಾಗಿ ಅವರ ನಿರ್ದೇಶನದಲ್ಲಿ ನಾವೆಲ್ಲ ಮುನ್ನಡೆಯುತ್ತೇವೆ" ಎಂದರು.
ಇನ್ನು "ಸಚಿವ ಸ್ಥಾನದ ಆಕಾಂಕ್ಷಿಗಳ ಕುರಿತು ಯಾವ ಗೊಂದಲವೂ ಇಲ್ಲ, ದೆಹಲಿಗೆ ಅವರವರ ಕೆಲಸದ ಮೇಲೆ ಹೋಗಿ ಬರುತ್ತಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಕಚೇರಿ ಉದ್ಘಾಟನೆ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಬೇಕಾಯಿತು. ಬೆಂಗಳೂರಿನಲ್ಲಿ ಡಿಫೆನ್ಸ್ ಲ್ಯಾಂಡ್ ಬದಲಾವಣೆ ಕೆಲಸಕ್ಕಾಗಿ ಕೇಂದ್ರ ಸಚಿವ ರಾಜನಾಥಸಿಂಗ್ ಹಾಗೂ ಇತರ ಸಚಿವರನ್ನು ಭೇಟಿ ಮಾಡಲು ನಾನು ಹೋಗಿದ್ದೆ ಹಾಗಾಗಿ ಎಲ್ಲವನ್ನು ರಾಜಕೀಯ ದೃಷ್ಟಿಯಲ್ಲಿ ನೋಡುವುದು ತಪ್ಪು ಎಂದು ಹೇಳಿದ್ದಾರೆ.