ವಾರಣಾಸಿ, ನ. 30 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರು ದೇವ್ ದೀಪಾವಳಿ ಹಬ್ಬದ ಪ್ರಯುಕ್ತ ಇಂದು ವಾರಣಾಸಿ ಭೇಟಿ ನೀಡಲಿದ್ದು, ಬಿಗಿ ಭದ್ರತಾ ವ್ಯವಸ್ಥೆಗಳೊಂದಿಗೆ ವಾರಣಾಸಿ ನಗರ ಅಲಂಕಾರಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮೋದಿಯವರು ವಾರಣಾಸಿ ಭೇಟಿ ವೇಳೆ ರಾಷ್ಟ್ರೀಯ ಹೆದ್ದಾರಿಯನ್ನು 6 ಲೇನ್ಗೆ ವಿಸ್ತರಿಸುವ ಕಾಮಗಾರಿಗೆ ಚಾಲನೆ ನೀಡಲಿದ್ದು, ಬಳಿಕ ಪ್ರವಾಸದ ವೇಳೆ ಕಾಶಿ ವಿಶ್ವನಾಥ ದೇಗುಲ ಪಥ ಕಾಮಗಾರಿಯ ಸ್ಥಳ ಪರಿಶೀಲಿಸಲಿದ್ದಾರೆ. ಪುರಾತನ ಸ್ಮಾರಕ ಸಾರನಾಥದಲ್ಲಿ ನಡೆಯಲಿರುವ ಧ್ವನಿ-ಬೆಳಕು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಾರಣಾಸಿಯಲ್ಲಿ ಸಂಪ್ರದಾಯದಂತೆ ದೇವ್ ದೀಪಾವಳಿ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಧಾನಿ, ರಾಜ್ಘಾಟ್ನಲ್ಲಿ ಹಣತೆ ಹಚ್ಚಲಿದ್ದು, ಬಳಿಕ ಗಂಗೆಯ ಎರಡೂ ತಟಗಳಲ್ಲಿ 11 ಲಕ್ಷ ಹಣತೆಗಳನ್ನು ಬೆಳಗಲಾಗುತ್ತದೆ.