ಸಿಲಿಗಿರಿ, ನ. 30 (DaijiworldNews/HR): ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ನ ನಾಯಕರು ಸರಣಿ ರಾಜೀನಾಮೆ ಕೊಟ್ಟಿದ್ದ ಕಾರಣ ಬೇಸತ್ತಿದ್ದ ಮಮತಾ ಬ್ಯಾನರ್ಜಿಯ ಟಿಎಂಸಿ ಪಕ್ಷಕ್ಕೆ ಜಿಜೆಎಂ ಪಕ್ಷ ಬೆಂಬಲ ಘೋಷಿಸಿದೆ.
ಈ ಕುರಿತು ಮಾತನಾಡಿರುವ ಗೋರ್ಖಾ ಜನಮುಕ್ತಿ ಮೋರ್ಚಾದ ರೋಷನ್ ಗಿರಿ, ಬಿಜೆಪಿ ಪಕ್ಷವು ನಮಗೆ ಮೋಸ ಮಾಡಿದ್ದು ಮುಂಬರುವ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಸೋಲಿಸಲು ನಿರ್ಧರಿಸಿದ್ದೆವೆ. ಇಲ್ಲಿಯವರೆಗೆ ಬಿಜೆಪಿಯೂ ನೀದಿರುವ ಒಂದೇ ಒಂದು ಭರವಸೆಯನ್ನೂ ಕೂಡ ಈಡೇರಿಸಿಲ್ಲ, ಅವರಿಗೆ ಭರವಸೆ ನೀಡುವುದಷ್ಟೆ ಗೊತ್ತಿದೆ ಎಂದರು.
ಇನ್ನು ಉತ್ತರ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ನಾವು ಬೆಂಬಲಿಸಲಿಸುತ್ತಿದ್ದು, ಅವರೇ ಮೂರನೇ ಬಾರಿ ಮುಖ್ಯಮಂತ್ರಿಯಾಗಬೇಕೆಂಬುದು ನಮ್ಮ ಆಶಯ ಹಾಗಾಗಿ 2021 ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ನಾವು ಬೆಂಬಲಿಸುವುದಾಗಿ ತಿಳಿಸಿದ್ದಾರೆ.