ಬೆಂಗಳೂರು, ನ.30 (DaijiworldNews/PY): ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಿಜೆಪಿಗೆ ಬಂದವರು ವಿಧಾನಮಂಡಲ ಅಧಿವೇಶನದ ಮೊದಲು ಸಂಪುಟ ವಿಸ್ತರಣೆ ಮಾಡಿ ಎನ್ನುವ ಬೇಡಿಕೆ ಮುಂದಿಡಲು ಮುಂದಾಗಿದ್ದಾರೆ.
"ಸಚಿವ ಸಂಪುಟ ವಿಸ್ತರಣೆ ಮಾಡುವುದು ಗೊಂದಲದಿಂದ ಕೂಡಿದ್ದು, ನಮಗೆ ಕೊಟ್ಟಿರುವ ಮಾತನ್ನು ಮೊದಲು ಉಳಿಸಿಕೊಳ್ಳಿ. ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ನಮ್ಮ ಹಿತಾಕ್ತಿಯನ್ನು ಉಳಿಸಿ" ಎಂದಿದ್ದಾರೆ.
ಇವರು ಸೋಮವಾರ ಸಿಎಂ ಬಿಎಸ್ವೈ ಅವರ ಭೇಟಿಗೆ ತೀರ್ಮಾನ ಮಾಡಿದ್ದು, ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡಿ ನಮ್ಮನ್ನ ಮಂತ್ರಿ ಮಾಡಿ ಎನ್ನುವ ಬೇಡಿಕೆ ಮುಂದಿಡಲಿದ್ದಾರೆ ಎನ್ನಲಾಗಿದೆ.