ನವದೆಹಲಿ, ನ. 30 (DaijiworldNews/HR): ಕೊರೊನಾ ಪ್ರಾಯೋಗಿಕ ಲಸಿಕೆಯಿಂದಾಗಿ ಅಡ್ಡಪರಿಣಾಮಗಳಾಗಿವೆ ಎಂದು ವ್ಯಕ್ತಿಯೊಬ್ಬರು ಆರೋಪ ಮಾಡಿದ್ದು, ಅದರಂತೆ ಭಾರತೀಯ ಔಷಧ ಮಹಾನಿಯಂತ್ರಕ ಮತ್ತು ಸಾಂಸ್ಥಿಕ ನೈತಿಕ ಸಮಿತಿಯು ತನಿಖೆ ನಡೆಸಲಿದ್ದು, ಅದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಕೈ ಜೋಡಿಸಿದೆ.
ವ್ಯಕ್ತಿಯೊಬ್ಬರು ಚೆನ್ನೈನ ರಾಮಚಂದ್ರ ಇನ್ಸ್ಟಿಟ್ಯೂಟ್ ಆಫ್ ಹಯರ್ ಎಜುಕೇಷನ್ ಎಂಡ್ ರಿಸರ್ಚ್ ಸೆಂಟರ್ನಲ್ಲಿ ಸೆರಂ ಇನ್ಸ್ಟಿಟ್ಯೂಟ್ ಪರವಾಗಿ, ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರಾಯೋಗಿಕ ಕೊರೊನಾ ಲಸಿಕೆ ಪಡೆದ ಹತ್ತು ದಿನಗಳ ಬಳಿಕ ಅವರಲ್ಲಿ ನರಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಅವರನ್ನು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ಆ ವ್ಯಕ್ತಿಯಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಲು ಕೊರೊನಾ ಲಸಿಕೆಯೇ ಕಾರಣ ಎಂದು ಚೆನ್ನೈನ ನರಶಾಸ್ತ್ರಜ್ಞರೊಬ್ಬರು ಹೇಳಿದ್ದು, ವ್ಯಕ್ತಿಯು ಸೆರಂ ಇನ್ಸ್ಟಿಟ್ಯೂಟ್ಗೆ ನೋಟಿಸ್ ನೀಡಿ 5 ಕೋಟಿ ಪರಿಹಾರ ನೀಡಲು ಆಗ್ರಹಿಸಿದ್ದಾರೆ. ಆದರೆ ವ್ಯಕ್ತಿಯ ಅನಾರೋಗ್ಯಕ್ಕೆ ಲಸಿಕೆಯ ಜತೆ ಯಾವ ಸಂಬಂಧವೂ ಇಲ್ಲ ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಕ್ಕಾಗಿ 100 ಕೋಟಿ ಪರಿಹಾರ ನೀಡಬೇಕು ಎಂದು ಸೆರಂ ಸಂಸ್ಥೆಯು ಹೇಳಿದೆ.