ಶ್ರೀನಗರ,ನ. 30 (DaijiworldNews/HR): ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ನಡೆದ ಮೊದಲ ಚುನಾವಣೆಯ ನಂತರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಾಶ್ಮೀರದ ಸಮಸ್ಯೆ ಕೇವಲ ಚುನಾವಣೆಯಿಂದ ಬಗೆಹರಿಯಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಆರ್ಟಿಕಲ್ 370 ಅನ್ನು ಮತ್ತೆ ಸ್ಥಾಪಿಸುವವರೆಗೆ ಕಾಶ್ಮೀರದ ಸಮಸ್ಯೆ ಬಗೆಹರಿಯುವುದಿಲ್ಲ. ಚುನಾವಣೆಯ ಬಳಿಕ ಮಂತ್ರಿಗಳು ಬರುತ್ತಾರೆ ಮತ್ತು ಹೋಗುತ್ತಾರೆ ಹಾಗಾಗಿ ಕೇವಲ ಚುನಾವಣೆಯೊಂದೆ ಕಾಶ್ಮೀರ ಸಮಸ್ಯೆಗೆ ಪರಿಹಾರವಲ್ಲ" ಎಂದರು.
ಇನ್ನು "ನಾವು ಚೀನಾದೊಂದಿಗೆ 9, 10ನೇ ಸುತ್ತಿನ ಮಾತುಕತೆ ನಡೆಸುತ್ತಿದ್ದೇವೆ, ಆದರೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿಲ್ಲ ಯಾಕೆ ಅದು ಮುಸ್ಲಿಂ ರಾಷ್ಟ್ರವಾದ್ದರಿಂದಲೇ? ಈಗ ಎಲ್ಲವನ್ನೂ ಕೋಮುವಾದವನ್ನಾಗಿ ಮಾಡಲಾಗುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.