ಚಿಕ್ಕಮಗಳೂರು, ನ.29 (DaijiworldNews/PY): "ಉಗ್ರರಿಗೆ ಬಿರಿಯಾನಿ ನೀಡುವ ಕಾಲ ಈಗ ಹೋಗಿದೆ. ಉಗ್ರವಾದಿಗಳು ಈಗ ಹೋಗಬೇಕಾಗಿರುವುದ ಮಸಣಕ್ಕೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಮಂಗಳೂರಿನಲ್ಲಿ ವಿವಾದಾತ್ಮಕ ಗೋಡೆ ಬರಹ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಈಗ ಏನಿದ್ದರೂ ಉಗ್ರವಾದಿಗಳು ಮಸಣಕ್ಕೆ ಹೋಗಬೇಕು. ಮಸಣಕ್ಕೆ ಕಳಿಸುವ ಕಾರ್ಯವನ್ನು ಪೊಲೀಸ್ ಹಾಗೂ ಸೇನೆ ಮಾಡುತ್ತಿದೆ. ಉಗ್ರರ ಪರ ನಿಲ್ಲುವ ರಾಜಕೀಯ ವ್ಯವಸ್ಥೆಯೂ ಕೂಡಾ ಈಗ ಇಲ್ಲ. ಕಾಶ್ಮೀರದಲ್ಲೇ ಉಗ್ರ ತಲೆ ಬಾಲ ತುಂಡರಿಸಿದ್ದೇವೆ" ಎಂದಿದ್ದಾರೆ.
ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ವಿಚಾರವಾಗಿ ಡಿಕೆಶಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ತಮ್ಮದೇ ಪಕ್ಷದ ಶಾಸಕನ ಮನೆಗೆ ಬೆಂಕಿ ಹಾಕಿರುವವರ ಪರ ರಕ್ಷಣೆಯ ಬಗ್ಗೆ ಮಾತನಾಡುತ್ತೀರಾ?. ಸಂತ್ರಸ್ತ ಶಾಸಕರು ದೂರು ದಾಖಲು ಮಾಡಿದ್ದರೂ ಕೂಡಾ ಇನ್ನೂ ಕ್ರಮ ಕೈಗೊಂಡಿಲ್ಲ" ಎಂದು ಹೇಳಿದ್ದಾರೆ.
ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಪಕ್ಷದ ಸೂಚನೆ ಇಲ್ಲದೇ ಯಾವುದೇ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ಸಿಎಂ ಹಾಗೂ ಪಕ್ಷದ ವರಿಷ್ಟರಿಗೆ ಬಿಟ್ಟ ವಿಚಾರ" ಎಂದಿದ್ದಾರೆ.