ಬಾಗಲಕೋಟೆ, ನ. 29 (DaijiworldNews/MB) : ''ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬೇರೆಯವರನ್ನು ಸಿಎಂ ಮಾಡುವ ಬಗ್ಗೆ ಚರ್ಚೆ ನಡೆದೇ ಇಲ್ಲ'' ಎಂದು ವಿಧಾನಪರಿಷತ್ ಸದಸ್ಯ ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಮ್ಮಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಅಧಿಕಾರವಧಿ ಮುಕ್ತಾಯದವರೆಗೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರಲಿದ್ದಾರೆ'' ಎಂದರು.
''ವಲಸಿಗರು, ಮೂಲರು ಎಂಬ ಯಾವುದೇ ವಿಚಾರ ಬಿಜೆಪಿಯಲ್ಲಿ ಇಲ್ಲ. ನಾವೆಲ್ಲರೂ ಬಿಜೆಪಿ ಪಕ್ಷಕ್ಕೆ ಸೇರಿದವರೇ'' ಎಂದು ಹೇಳಿದ ಅವರು, ''ಸಂಪುಟ ವಿಸ್ತರಣೆ ತಡೆವಾಗುತ್ತದೆ ಎಂದು ಸಿಎಂ ಹೇಳಿದ ಬಳಿಕ ನಾವು ಕಾಯಬೇಕು'' ಎಂದು ಹೇಳಿದರು.
''ಬಿ ಎಸ್ ಯಡಿಯೂರಪ್ಪನವರು ನನ್ನನ್ನು ಮಂತ್ರಿ ಮಾಡುತ್ತೇನೆ, ಮಾಡುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಕೆಲವೇ ದಿನದಲ್ಲಿ ಆ ಸಂದರ್ಭ ಬರುತ್ತದೆ'' ಎಂದರು.