ಮುಂಬೈ, ನ.29 (DaijiworldNews/PY): "ರೈತರನ್ನು ದೆಹಲಿಗೆ ಪ್ರವೇಶಿಸದಂತೆ ತಡೆದ ರೀತಿ ಅವರನ್ನು ಈ ದೇಶದ ಪ್ರಜೆಗಳೇ ಅಲ್ಲ ಎನ್ನುವ ರೀತಿಯಲ್ಲಿ ಕಾಣಿಸುತ್ತಿತ್ತು. ರೈತರನ್ನು ಭಯೋತ್ಪಾದಕರಂತೆ ಕಾಣುವ ರೀತಿ ನಿಜಕ್ಕೂ ಅವಮಾನಕರವಾದ ಸಂಗತಿಯಾಗಿದೆ" ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
"ರೈತರು ಪಂಜಾಬ್ ಹಾಗೂ ಹರಿಯಾಣದ ಕಡೆಇಂದ ಬರುತ್ತಿರುವ ಕಾರಣ ಅವರು ಸಿಖ್ಖರು. ಅಂತಹವರು ಖಲಿಸ್ತಾನದ ಭಯೋತ್ಪದನಾ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ. ಈ ವಿಚಾರ ನಿಜವಾಗಿಯೂ ರೈತರಿಗೆ ಮಾಡಿದ ಅಪಮಾನವಾಗಿದೆ" ಎಂದಿದ್ದಾರೆ.
ಈ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೂ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದು, "ರೈತರನ್ನು ಭಯೋತ್ಪಾದಕರು ಎಂದು ಕರೆಯುವುದಾದರೆ ರೈತರು ಬೆಳೆದ ಬೆಳೆಗಳನ್ನು ಏಕೆ ಖರೀದಿ ಮಾಡಬೇಕು?. ರೈತರನ್ನು ಭಯೋತ್ಪಾದಕರು ಎಂದು ಕರೆಯುವ ಮೂಲಕ ಬಿಜೆಪಿಗರು ರೈತರಿಗೆ ಅವಮಾನ ಮಾಡಿದ್ದಾರೆ. ಹಾಗಾದರೆ, ಬಿಜೆಪಿಗರು ರೈತರು ಬೆಳೆದ ಬೆಳಗಳನ್ನು ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಲಿ" ಎಂದು ಹೇಳಿದ್ದಾರೆ.