ಚಿಕ್ಕಬಳ್ಳಾಪುರ, ನ.29 (DaijiworldNews/PY): "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಸೂಕ್ತವಲ್ಲ. ಅವರು ರಾಜಕೀಯದ ಸಲುವಾಗಿ ಜನರ ಹಾದಿ ತಪ್ಪಿಸಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಗ್ರಾಮ ಸ್ವರಾಜ್ಯ ಸಮಾವೇಶಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ಧರಾಮಯ್ಯ ಅವರು ನಳಿನ್ಗೆ ರಾಜಕೀಯ ಪ್ರಬುದ್ಧತೆ ಇಲ್ಲವೆಂದು ಹೇಳಿದ್ದಾರೆ. ಅವರು ಮಹಾನ್ ಜ್ಞಾನಿ ಅಂತವರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ" ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗರು ಎನ್ನುವ ಪದದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿ ಸರ್ಕಾರ ರಚನೆಗೆ ಸಹಕಾರ ನೀಡಿದಂತ ಪ್ರತಿಯೋರ್ವರಿಗೂ ಕೊಟ್ಟ ಮಾತನ್ನು ಉಳಿಕೊಂಡಿದ್ದು, ಅವರಿಗೆ ನ್ಯಾಯ ಕೊಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಎಂಟಿಬಿ ಅವರು ಹಣೆಬರಹ ಸರಿಯಲ್ಲಿ ಎಂದು ಹೇಳಿಕೆ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಎಂಟಿಬಿ ಅವರು ಈ ರೀತಿಯಾಗಿ ಹೇಳಿದ್ದು, ನೋವಿನಿಂದಲ್ಲ ಬದಲಾಹಿ ಒಂದು ವರ್ಷ ಆಯಿತು ಎಂದಷ್ಟೆ. ಸರ್ಕಾರ ರಚನೆಗೆ ಸಹಕರಿಸಿ ಪ್ರತಿಯೋರ್ವರಿಗೆ ನ್ಯಾಯ ದೊರಕಲಿದೆ" ಎಂದಿದ್ದಾರೆ.