ಹೈದರಾಬಾದ್, ನ. 29 (DaijiworldNews/MB) : ನಿಮ್ಮ ಇಡೀ ಪೀಳಿಗೆ ಕೊನೆಯಾಗಬಹುದು ಆದರೆ ಹೈದರಾಬಾದ್ ಹೆಸರು ಹಾಗೇ ಇರುತ್ತೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ತಿರುಗೇಟು ನೀಡಿದ್ದಾರೆ.
''ಮುಂದಿನ ವಾರ ಹೈದರಾಬಾದ್ ಮಹಾನಗರ ಪಾಲಿಕೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ನ್ನು ಭಾಗ್ಯನಗರ ಎಂದು ಮರು ನಾಮಕರಣ ಮಾಡಲಾಗುವುದು'' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಓವೈಸಿ, ''ನಿಮ್ಮ ಇಡೀ ಪೀಳಿಗೆ ಕೊನೆಯಾಗಬಹುದು ಆದರೆ ಹೈದರಾಬಾದ್ ಹೆಸರು ಹಾಗೇ ಇರುತ್ತದೆ'' ಎಂದು ಹೇಳಿದ್ದಾರೆ.
''ಈಗ ಚುನಾವಣೆಯು ಹೈದರಾಬಾದ್ ಮತ್ತು ಭಾಗ್ಯನಗರದ ಮಧ್ಯೆ ನಡೆಯುತ್ತದೆ. ನಿಮಗೆ ಹೈದರಾಬಾದ್ ಹೆಸರು ಉಳಿಯಬೇಕಾದರೆ ನಮಗೆ ಮತ ನೀಡಿ'' ಎಂದು ಜನರಲ್ಲಿ ಓವೈಸಿ ಮನವಿ ಮಾಡಿದ್ದಾರೆ.
150 ಸದಸ್ಯರ ಜಿಎಚ್ಎಂಸಿಗೆ ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್ 4 ರಂದು ನಡೆಯಲಿದೆ.