ಚಿತ್ರದುರ್ಗ, ನ.29 (DaijiworldNews/PY): "ಎರಡು, ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುವ ವಿಶ್ವಾಸವಿದೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಚಿತ್ರದುರ್ಗ ಮುರುಘಾ ಮಠದಲ್ಲಿ ನಿರ್ಮಿಸಿರುವ ಮುರುಘಾ ಶ್ರೀ ಪ್ರಾಚ್ಯವಸ್ತು ಸಂಗ್ರಹಾಲಯ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂದು ಸಚಿವ ಸಂಪುಟ ವಿಸ್ತರಣೆಯ ವಿಚಾರವಾಗಿ ದೆಹಲಿ ವರಿಷ್ಠರೊಂದಿಗೆ ಮಾತನಾಡುತ್ತೇನೆ" ಎಂದರು.
"ಇಲ್ಲಿಯವರೆಗೆ ಯಾವುದೇ ಗೊಂದಲವಿಲ್ಲ. ಶೀಘ್ರವೇ ಬಗೆಹರಿಸಲು ತಿಳಿಸುತ್ತೇನೆ. ಈ ವಿಚಾರವಾಗಿ ದೆಹಲಿ ನಿರ್ಧಾರವೇ ಅಂತಿಮ" ಎಂದು ತಿಳಿಸಿದರು.
ಈ ವೇಳೆ, ಮೆಕ್ಕೆ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ರೈತರು ಮನವಿ ಮಾಡಿದ್ದು, ಈ ಬಗ್ಗೆ ಕೆಎಂಎಫ್ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಂದು ಒತ್ತಾಯಿಸಿದರು.