ಹೈದರಾಬಾದ್, ನ.29 (DaijiworldNews/PY): "ಆರು ವರ್ಷಗಳ ಹಿಂದೆ ನಮ್ಮ ರಾಜ್ಯವು 13ನೇ ಸ್ಥಾನದಲ್ಲಿತ್ತು. ಈಗ 5ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ ಅಥವಾ 29 ನೇ ಸ್ಥಾನದಲ್ಲಿದ್ದು, ನಮಗೆ ಅವರು ಪಾಠ ಕಲಿಸಲು ಬರುತ್ತಾರೆ" ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಕಿಡಿಕಾರಿದ್ದಾರೆ.
ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರದ ಸಂದರ್ಭ ಮಾತನಾಡಿದ ಅವರು, "ಆದಾಯದಲ್ಲಿ 28ನೇ ಸ್ಥಾನದಲ್ಲಿರುವ ಮುಖ್ಯಮಂತ್ರಿಯೋರ್ವರು ಐದನೇ ಸ್ಥಾನದಲ್ಲಿರುವ ನಮಗೆ ಪಾಠ ಕಲಿಸಲು ಬರುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.
ಹೈದರಾಬಾದ್ನಲ್ಲಿ ಶನಿವಾರ ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದ ಸಂದರ್ಭ ಮಾತನಾಡಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು, "ಟಿಆರ್ಎಸ್ ಅಧಿಕಾರ ದುರ್ಬಳಕೆ ಹಾಗೂ, ಭ್ರಷ್ಟಾಚಾರದಲ್ಲಿ ತೊಡಗಿದೆ. ಲೂಟಿ ಮಾಡಲು ಇನ್ನು ಅವಕಾಶ ಕಲ್ಪಿಸುವುದಿಲ್ಲ ಎನ್ನುವ ಮಾತನ್ನು ಅವರಿಗೆ ಮತದಾರರರು ನೀಡಬೇಕು" ಎಂದಿದ್ದರು.
ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆಗೆ ಚಂದ್ರಶೇಖರ್ ರಾವ್ ಯೋಗ ಆದಿತ್ಯನಾಥ್ ವಿರುದ್ದ ಕೆಂಡಾಕಾರಿದ್ದಾರೆ.
ರಾಜ್ಯದ ನೆರೆಹಾವಳಿ ಹಾಗೂ ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನೆರೆಹಾವಳಿ ಪರಿಸ್ಥಿತಿಯನ್ನು ನಿಭಾಯಿಸಲು 1,300 ಕೋಟಿ ನೆರವು ಕೇಳಿದರೆ, 13 ರೂ.ಗಳನ್ನು ಕೇಂದ್ರ ನೀಡಲಿಲ್ಲ. ಆದರೆ, ಎಲ್ಐಸಿ, ರೈಲ್ವೆಯಂತಹ ವಲಯದ ಉದ್ಯಮಗಳನ್ನು ಮಾರಾಟ ಮಾಡುತ್ತಿದೆ" ಎಂದಿದ್ದಾರೆ.