ಬೆಳಗಾವಿ, ನ. 29 (DaijiworldNews/MB) : ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮುಸ್ಲಿಂ ಸಮುದಾಯದವರಿಗೆ ಬಿಜೆಪಿ ಟಿಕೆಟ್ ನೀಡಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ''ಬೆಳಗಾವಿ ಹಿಂದುತ್ವದ ಕೇಂದ್ರವಾಗಿದ್ದು ಇಲ್ಲಿ ಮುಸ್ಲಿಂ ಸಮುದಾಯದವರಿಗೆ ಬಿಜೆಪಿ ಟಿಕೆಟ್ ನೀಡಲ್ಲ'' ಎಂದರು.
''ಹಾಗೆಯೇ ಇಲ್ಲಿ ನಾವು ಶಂಕರಾಚಾರ್ಯ, ರಾಣಿ ಚನ್ನಮ್ಮ ಅಥವಾ ಸಂಗೊಳ್ಳಿರಾಯಣ್ಣನ ಶಿಷ್ಯರಿಗೆ ಮಾತ್ರ ಟಿಕೆಟ್ ನೀಡುತ್ತೇವೆ'' ಎಂದು ಹೇಳಿದರು.