ರಾಯಪುರ, ನ. 29 (DaijiworldNews/MB) : ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಶನಿವಾರ ರಾತ್ರಿ ಸುಧಾರಿತ ಐಇಡಿ ದಾಳಿ ನಡೆಸಿದ್ದು ಈ ದಾಳಿಯಿಂದ ಓರ್ವ ಸಿಆರ್ಪಿಎಫ್ ಕಮಾಂಡೋ ಹುತಾತ್ಮರಾದರೆ, 10 ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭದ್ರತಾ ಸಿಬ್ಬಂದಿಗಳು ನಕ್ಸಲರ ವಿರುದ್ಧ ಶೋಧ ಕಾರ್ಯಾಚರಣೆ ನಡೆಸಿ ಹಿಂತಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಸುಧಾರಿತ ಐಇಡಿಗಳು ಸ್ಪೋಟವಾಗಿ 10 ಮಂದಿ ಯೋಧರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಮಾಂಡೋ ನಿತಿನ್ ಭಲೇರಾವ್ ಸಾವನ್ನಪ್ಪಿದ್ದಾರೆ. ಗಾಯಗೊಂಡ ಎಲ್ಲಾ ಯೋಧರು ಕೋಬ್ರಾ 206ನೇ ಬೆಟಾಲಿಯನ್ಗೆ ಸೇರಿದವರಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.