ಮೈಸೂರು,ನ. 28 (DaijiworldNews/HR): ಮಾಸ್ಕ್ ಮತ್ತು ವಾಹನಗಳ ದಾಖಲೆಗಳ ತಪಾಸಣೆ ನೆಪದಲ್ಲಿ ಸರ್ಕಾರವೇ ಪೊಲೀಸರ ಮೂಲಕ ರೋಲ್ಕಾಲ್ ನಡೆಸುತ್ತಿದೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, " ಒಂದೊಂದು ತಾಲ್ಲೂಕಿನಿಂದ, ಒಂದೊಂದು ಠಾಣೆಯಿಂದ ಇಷ್ಟು ಹಣ ವಸೂಲಿ ಮಾಡಬೇಕೆಂದು ಅಧಿಕಾರಿಗಳಿಗೆ ಸರ್ಕಾರವೇ ತಿಳಿಸಿದ್ದು, ಅದರಂತೆ ಪೊಲೀಸರು ರೋಲ್ಕಾಲ್ ಮಾಡುತ್ತಿದ್ದು, ಇದನ್ನು ತಕ್ಷಣವೇ ನಿಲ್ಲಿಸುವಂತೆ ಗೃಹ ಸಚಿವರು ಸೂಚನೆ ನೀಡಬೇಕು" ಎಂದರು.
ಇನ್ನು ಬೈಕ್ನಲ್ಲಿ ತೆರಳಿ ಕೂಲಿ ಕೆಲಸ ಮಾಡುವವರಿಗೆ 500 ದಂಡ ವಿಧಿಸಿದರೆ ಅವರು ಎಲ್ಲಿಂದ ಹಣ ಕಟ್ಟಬೇಕು, ದುಡಿಮೆಯನ್ನು ದಂಡಕ್ಕೆಂದು ಪಾವತಿಸಬೇಕೇ? ಈಗಾಗಲೇ ಕೊರೊನಾದಿಂದ ಜನ ಸಾಕಷ್ಟು ನೊಂದಿದ್ದಾರೆ ಹಾಗಾಗಿ ಅಧಿಕಾರಿಗಳಿಗೆ ನೀಡಿರುವ ಗುರಿಯನ್ನು ಹಿಂಪಡೆಯಬೇಕು ಎಂದು ಹೇಳಿದ್ದಾರೆ.