ಚಿತ್ರದುರ್ಗ, ನ.28 (DaijiworldNews/PY): "ರಾಜ್ಯದಲ್ಲಿ ನಾವು ಆರು ತಂಡಗಳಾಗಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಲಿದ್ದೇವೆ" ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತಾಡಿದ ಅವರು, "ಶೇ.70-80ರಷ್ಟು ಅಭ್ಯರ್ಥಿಗಳನ್ನು ಗೆಲ್ಲಿಸುವಂತಹ ಉದ್ದೇಶ ಹೊಂದಿದ್ದೇವೆ. ಬಿಜೆಪಿ ಗೆಲ್ಲಬೇಕೆಂದರೆ ತಳಪಾಯ ಗಟ್ಟಿಯಾಗಿರುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷದಿಂದ ಪಂಚರತ್ನ ಸಮಿತಿಯನ್ನು ರಚಿಸಿ ಗ್ರಮಾದ ಮನೆ ಮನೆಗಳಿಗೆ ತೆರಳಿ ಕೇಂದ್ರದ ಅನುದಾನಗಳನ್ನು ಜನರಿಗೆ ತಲುಪಿಸುವಂತ ಕಾರ್ಯವನ್ನು ಗ್ರಾ.ಪಂ ಸದಸ್ಯರ ಮುಖೇನ ಮಾಡುತ್ತೇವೆ" ಎಂದಿದ್ದಾರೆ.
"ಗ್ರಾ.ಪಂ ಗಳಲ್ಲಿ ಸ್ಪರ್ಧಿಸುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿ ಹೊಂದಿದ್ದೇವೆ. ನಾನು ಇಂದಿನಿಂದ ನಾಲ್ಕು ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದೇನೆ" ಎಂದು ಮಾಹಿತಿ ನೀಡಿದರು.