ಚಿತ್ರದುರ್ಗ, ನ.28 (DaijiworldNews/PY): "ಮೊಳಕಾಲ್ಮುರು ತಾಲೂಕಿಗೆ ವಿಶೇಷ ಸ್ಥಾನ ಲಭ್ಯವಾಗಬೇಕು" ಎಂದು ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದ್ಧಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಸಂವಿಧಾನದ 371 (ಜೆ) ಕಾಲಂ ಅಡಿಯಲ್ಲಿ ಕಲ್ಪಿಸಿದ ವಿಶೇಷ ಸ್ಥಾನ ಅತ್ಯಂತ ಹಿಂದುಳಿದ ಮೊಳಕಾಲ್ಮುರು ತಾಲೂಕಿಗೂ ಕೂಡಾ ದೊರಕಬೇಕು" ಎಂದು ತಿಳಿಸಿದ್ದಾರೆ.
"ಮೊಳಕಾಲ್ಮುರಿಗೆ ವಿಶೇಷ ಸ್ಥಾನ ದೊರಕಿದರೆ ಮತ್ತಷ್ಟು ಅನುದಾನ ಬರಲಿದ್ದು, ಇದರಿಂದ ತಾಲೂಕಿನ ಅಭಿವೃದ್ಧಿಗೆ ಸಹಾಯವಾಗಲಿದೆ. ಆದರೆ, ಮೊಳಕಾಲ್ಮುರು ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸುವ ವಿಷಯದಲ್ಲಿ ಜನರ ಹಾಗೂ ಹೋರಾಟಗಾರರ ಅಭಿಪ್ರಾಯ ಅಂತಿಮವಾಗಿದೆ" ಎಂದಿದ್ದಾರೆ.
"ಬಳ್ಳಾರಿ ಜಿಲ್ಲೆಯ ವಿಭಜನೆಯ ನಿರ್ಧಾರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತೆಗೆದುಕೊಂಡಿದ್ದಾರೆ. ಈ ಹಿಂದ ಜಿಲ್ಲೆಯಲ್ಲಿ ಹಲವು ವಿಧಾನಸಭಾ ಕ್ಷೇತ್ರಗಳಿದ್ದವು" ಎಂದು ತಿಳಿಸಿದ್ದಾರೆ.