ಚಿತ್ರದುರ್ಗ, ನ.28 (DaijiworldNews/PY): "ಸಾಲ ಮಾಡಿ ಎಲ್ಲಾ ಭಾಗ್ಯಗಳನ್ನು ನೀಡಿ ರಾಜ್ಯಕ್ಕೆ ದೌರ್ಭಾಗ್ಯವನ್ನು ತಂದವರು ಸಿದ್ಧರಾಮಯ್ಯ" ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "2013ರಲ್ಲಿ 1.31 ಲಕ್ಷ ಕೋಟಿ. ರೂ.ನಷ್ಟು ಇದ್ದ ರಾಜ್ಯದ ಸಾಲ ಸಿದ್ಧರಾಮಯ್ಯ ಅವರು ಸಿಎಂ ಹುದ್ದೆಯಿಂದ ಕೆಳಗಿಳಿಯುವ ವೇಳೆ ಸಾಲದ ಮೊತ್ತ 2.86 ಲಕ್ಷ ಕೋಟಿ. ರೂ ತಲುಪಿತ್ತು.ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳು ಮಾಡಿದ ಸಾಲವನ್ನು ದ್ವಿಗುಣಗೊಳಿಸಿದ ಕೀರ್ತಿ ಸಿದ್ಧರಾಮಯ್ಯವರಿಗೆ ಸಲ್ಲಬೇಕು" ಎಂದು ಲೇವಡಿ ಮಾಡಿದರು.
"ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಭಯೋತ್ಪಾದನೆಯನ್ನು ಕಿತ್ತೆಸೆಯುವ ಸಲವಾಗಿ ಕರಾವಳಿಗೆ ಹೆಚ್ಚಿನ ಗಮನಹರಿಸುವ ಅವಶ್ಯಕತೆ ಇದೆ" ಎಂದರು.